ಕುಡಿದ ಮತ್ತಿನಲ್ಲಿ ತಾನು ಸೆಲಿಬ್ರಿಟಿ ಎಂಬುದನ್ನು ಮರೆತ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್!
ಆದರೆ, ಮಂಗಳವಾರ ರಾತ್ರಿ ಎಮ್ ಜಿ ರೋಡಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಪಬ್ ಒಂದರಲ್ಲಿ ಕುಡಿದು ಮಾಧ್ಯಮದ ಪ್ರತಿನಿಧಿಗಳೊಂದಿಗೆ ರಂಪಾಟ ಮಾಡಿದ್ದು ಮಾತ್ರ ಒಬ್ಬ ಸೆಲಿಬ್ರಿಟಿಯ ವರ್ತನೆಗೆ ತಕ್ಕುದ್ದಾಗಿರಲಿಲ್ಲ.
ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಸೆಲಿಬ್ರಿಟಿಗಳು ಭಾಗವಹಿಸುತ್ತಾರೆ ಮತ್ತು ಎಲ್ಲ ಭಾಷೆಗಳ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವವರೆಲ್ಲ ಸೆಲಿಬ್ರಿಟಿಗಳೇ ಅಂತ ಹೇಳುತ್ತಾರೆ. ಆದರೆ ಈ ಸ್ಪರ್ಧಿಗಳ ಜನಪ್ರಿಯತೆಯನ್ನು ಅಥವಾ ಅವರು ಸೆಲಿಬ್ರಿಟಿಗಳೆಂದು ಪರಿಗಣಿಸಲು ಯಾವ ಮಾನದಂಡ ಉಪಯೋಗಿಸಲಾಗುತ್ತದೆ ಅನ್ನೋದು ಕನ್ನಡಿಗರಿಗಂತೂ ಅರ್ಥವಾಗುತ್ತಿಲ್ಲ ಮಾರಾಯ್ರೇ. ಯಾಕೆ ಅಂತ ಗೊತ್ತುಂಟಾ? ಕನ್ನಡ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳೆಂದು ಆಯ್ಕೆಯಾಗುವ ಸೋ ಕಾಲ್ಡ್ ಸೆಲಿಬ್ರಿಟಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಕನ್ನಡಿಗರಿಗೆ ಗೊತ್ತಿರುವುದಿಲ್ಲ. ಹಾಗಾಗೇ, ಅಂಥ ಲೆಸ್ಸರ್ ನೋನ್ ಸ್ಪರ್ಧಿಗಳು, ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರ ಸೆಲಿಬ್ರಿಟಿಗಳ ಥರ ಆಡಲಾರಂಭಿಸುತ್ತಾರೆ.
ನಾವು ಹೇಳುತ್ತಿರೋದು ಈ ವಿಡಿಯೋನಲ್ಲಿ ಮಾಧ್ಯಮದ ಕೆಮೆರಾಮನ್ಗಳ ಜೊತೆ ರಂಪಾಟ ಮಾಡುತ್ತಿರುವ ನಟಿ-ಮಾಡೆಲ್ ಮತ್ತು ಮಾಜಿ ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿ ದಿವ್ಯಾ ಸುರೇಶ್ಗೆ ಅನ್ವಯಿಸದು. ಅವರ ಬಗ್ಗೆ ಕನ್ನಡಿಗರಿಗೆ ಚೆನ್ನಾಗಿ ಗೊತ್ತಿದೆ. ಅವರು ನಿಸ್ಸಂದೇಹವಾಗಿ ಸೆಲಿಬ್ರಿಟಿಯೇ.
ಆದರೆ, ಮಂಗಳವಾರ ರಾತ್ರಿ ಎಮ್ ಜಿ ರೋಡಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಪಬ್ ಒಂದರಲ್ಲಿ ಕುಡಿದು ಮಾಧ್ಯಮದ ಪ್ರತಿನಿಧಿಗಳೊಂದಿಗೆ ರಂಪಾಟ ಮಾಡಿದ್ದು ಮಾತ್ರ ಒಬ್ಬ ಸೆಲಿಬ್ರಿಟಿಯ ವರ್ತನೆಗೆ ತಕ್ಕುದ್ದಾಗಿರಲಿಲ್ಲ.
ಕುಡಿಯುವುದು ಅವರ ವೈಯಕ್ತಿಕ ವಿಚಾರ, ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ, ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದು ಗೊತ್ತಿದ್ದೂ ತಡ ರಾತ್ರಿಯವರೆಗೆ ಗೆಳೆಯರೊಂದಿಗೆ ಪಾರ್ಟಿ ಮಾಡಿದ ನಂತರ ರಸ್ತೆಗೆ ಬಂದು ತಮ್ಮನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಅದನ್ನು ಸೆರೆಹಿಡಿಯಲು ಮುಂದಾದ ಮಾಧ್ಯಮದವರ ಜೊತೆ ಜಗಳಕ್ಕಿಳಿಯುವುದು ಸೌಜನ್ಯತೆ ಅಲ್ಲ.
ಪೊಲೀಸರು ಮತ್ತು ಮಾಧ್ಯಮದವರು ತಮ್ಮ ತಮ್ಮ ಕೆಲಸ ಮಾಡುತ್ತಿರುತ್ತಾರೆ. ಅವರನ್ನು ಪ್ರಶ್ನಿಸಲು ದಿವ್ಯಾ ಮತ್ತು ಅವರು ಸ್ನೇಹಿತ ಯಾರೆಂದರೆ ಯಾರೂ ಅಲ್ಲ. ಅವರ ಸ್ನೇಹಿತ ಹಿರೋ ಎನಿಸಿಕೊಳ್ಳುವ ಉದ್ದೇಶದಿಂದ ಮಾಧ್ಯಮ ಜೊತೆ ಜಗಳಕ್ಕಿಳಿಯುತ್ತಾನೆ.
ಬಿಡಿ, ಅವನು ಯಾರೂ ಅಲ್ಲ, ಅವನ ಬಗ್ಗೆ ಬರೆಯುವ ಅವಶ್ಯಕತೆಯೂ ಇಲ್ಲ. ಆದರೆ, ಸೆಲಿಬ್ರಿಟಿಗಳು ಸಾರ್ವಜನಿಕ ಬದುಕಿನಲ್ಲಿ ಸೌಜನ್ಯತೆಯನ್ನು ಮರೆಯಬಾರದು, ಹದ್ದು ಮೀರಿ ವರ್ತಿಸಬಾರದು ಅನ್ನವುದನ್ನು ದಿವ್ಯಾ ಆದಷ್ಟು ಬೇಗ ತಿಳಿದಿಕೊಳ್ಳಬೇಕು.
ನಾವು ಹೇಳುತ್ತಿರುವುದರ ಹಿಂದಿನ ಉದ್ದೇಶ ಅಷ್ಟೇ ಮರಾಯ್ರೇ!
ಇದನ್ನೂ ಓದಿ: Viral Video: ನನ್ನನ್ನೂ ವಾಕಿಂಗ್ ಕರೆದುಕೊಂಡು ಹೋಗು; ಕಣ್ಣಲ್ಲೇ ಒಡೆಯನಿಗೆ ಮನವಿ ಮಾಡಿದ ನಾಯಿಯ ವಿಡಿಯೋ ವೈರಲ್