ಕುವೆಂಪು ಅವರ 118 ನೇ ಜನ್ಮ ಜಯಂತಿ ಸಂದರ್ಭದಲ್ಲಿ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರಕವಿ ಮತ್ತು ರಸಋಷಿಯನ್ನು ಸ್ಮರಿಸುವ ಸೌಭಾಗ್ಯ!

ಕುವೆಂಪು ಅವರ 118 ನೇ ಜನ್ಮ ಜಯಂತಿ ಸಂದರ್ಭದಲ್ಲಿ ಸಾಹಿತ್ಯ ಲೋಕದ ದಿಗ್ಗಜ, ರಾಷ್ಟ್ರಕವಿ ಮತ್ತು ರಸಋಷಿಯನ್ನು ಸ್ಮರಿಸುವ ಸೌಭಾಗ್ಯ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Dec 29, 2021 | 7:06 PM

ಗೋವಿಂದ ಪೈ ಅವರ ನಂತರ ರಾಷ್ಟ್ರಕವಿ ಎನಿಸಿಕೊಂಡ ಎರಡನೇ ವಿದ್ವಾಂಸರು ಕುವೆಂಪು. ರಾಜ್ಯದ ಬೆರಳೆಣಿಕೆಯ ಸಾಹಿತಿಗಳಿಗೆ ಮಾತ್ರ ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಕ್ಕಿದೆ. ಅವರೆಡನ್ನೂ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಗಿಟ್ಟಿಸಿಕೊಟ್ಟವರೆಂದರೆ ಕುವೆಂಪು.

ಕೇವಲ ಈ ಶತಮಾನದ ಅಂತಲ್ಲ, ಕನ್ನಡ ಸಾಹಿತ್ಯಿಕ ಇತಿಹಾಸದಲ್ಲೇ ಕುವೆಂಪು ಅವರು ಶ್ರೇಷ್ಠ ಕವಿ ಎಂದರೆ ಉತ್ಪ್ರೇಕ್ಷೆ ಅನಿಸದು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕಾಣಿಕೆ ಎಣಿಕೆ ಸಿಗಲಾರದು. ಬುಧವಾರ ಅವರ 118ನೇ ಜನ್ಮ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಅವರು ಜನಿಸಿದ್ದು ಡಿಸೆಂಬರ್ 29, 1904ರಂದು ಕುಪ್ಪಳ್ಳಿ ಹೆಸರಿನ ಶಿವಮೊಗ್ಗ್ಗ ಜಿಲ್ಲೆಯಲ್ಲಿರುವ ಒಂದು ಚಿಕ್ಕ ಗ್ರಾಮದಲ್ಲಿ. ಅವರ ತಂದೆಯವರ ಹೆಸರು ವೆಂಕಟಪ್ಪ, ಇವರ ಹೆಸರು ಪುಟ್ಟಪ್ಪ. ಅವರು ಪೂರ್ತಿ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅಂತಾದರೂ ಕುವೆಂಪು ಕಾವ್ಯನಾಮನಿಂದಲೇ ಅವರು ವಿಶ್ವಪ್ರಸಿದ್ಧರು. ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಅವರನ್ನು ವರಕವಿ ದ ರಾ ಬೇಂದ್ರೆ ಅವರು ಜಗದ ಕವಿ, ಯುಗದ ಕವಿ ಅಂತ ಉಲ್ಲೇಖಿಸುತ್ತಿದ್ದರು.

1949 ರಲ್ಲಿ ಗೋವಿಂದ ಪೈ ಅವರ ನಂತರ ರಾಷ್ಟ್ರಕವಿ ಎನಿಸಿಕೊಂಡ ಎರಡನೇ ವಿದ್ವಾಂಸರು ಕುವೆಂಪು. ರಾಜ್ಯದ ಬೆರಳೆಣಿಕೆಯ ಸಾಹಿತಿಗಳಿಗೆ ಮಾತ್ರ ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಕ್ಕಿದೆ. ಅವರೆಡನ್ನೂ ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ಗಿಟ್ಟಿಸಿಕೊಟ್ಟವರೆಂದರೆ ಕುವೆಂಪು.

ಹಾಗೆಯೇ ಕರ್ನಾಟಕ ಸರ್ಕಾರ ನೀಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಸಹ ಮೊದಲ ಬಾರಿಗೆ ಪಡೆದವರು ಇವರೇ. ಕುವೆಂಪು ಅವರನ್ನು ರಸಋಷಿ ಅಂತಲೂ ಸಂಬೋಧಿಸಲಾಗುತ್ತದೆ.

ಕುವೆಂಪುರವರು ತಮ್ಮ 25ನೇ ವಯಸ್ಸಿನಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಆರ್ಟ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಬದುಕು ಆರಂಭಿಸಿ ಅಂತಿಮವಾಗಿ ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿಗಳಾಗಿ ನಿವೃತ್ತಿ ಹೊಂದಿದರು.

ನಿಮಗೆ ಆಶ್ಚರ್ಯವಾಗಬಹುದು, ವಿದ್ಯಾರ್ಥಿಯಾಗಿರುವಾಗಲೇ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಅವರು ತಮ್ಮ 24 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಡೆದ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿಯಲ್ಲಿ 1933 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಸಹ ಕುವೆಂಪು ವಹಿಸಿದ್ದರು.

ತಮ್ಮ 33 ನೇ ವಯಸ್ಸಿನಲ್ಲಿ ಹೇಮಾವತಿಯವರನ್ನು ಮದುವೆಯಾದ ಕುವೆಂಪು ಅವರಿಗೆ ಖ್ಯಾತ ಸಾಹಿತಿ ಕೆ ಪಿ ಪೂರ್ಣಚಂದ್ರ ತೇಜಸ್ವೀ ಸೇರಿದಂತೆ ನಾಲ್ವರು ಮಕ್ಕಳು-ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತರಿಣಿ.

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ ಸಿ ನಾಗೇಶ ಟ್ವೀಟ್ ಮೂಲಕ ಕುವೆಂಪು ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ:   Watch ಸರ್ಬಿಯಾದಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಿಂದ ಪಾಕ್ ಪಿಎಂ ಇಮ್ರಾನ್ ಖಾನ್​​ ಟ್ರೋಲ್ ವಿಡಿಯೊ ಟ್ವೀಟ್

Published on: Dec 29, 2021 07:06 PM