ಇನ್ಸ್​​ಪೆಕ್ಟರ್ ಧಮ್ಕಿ ನಡುವೆಯೇ ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ

Updated on: Sep 18, 2026 | 5:44 PM

ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಪೊಲೀಸ್ ಠಾಣೆಯ 200 ಮೀಟರ್​ ದೂರದಲ್ಲೇ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಅಷ್ಟೇ ಅಲ್ಲ, ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಸೆಪ್ಟೆಂಬರ್ 18ರಂದು ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಕರೆ ಕೊಟ್ಟಿದ್ದರು. ಅದರಂತೆ ಟಿ.ನರಸೀಪುರ ಗಣೇಶನ ಬೃಹತ್ ಶೋಭಾಯಾತ್ರೆಯ ನೇರಪ್ರಸಾರ ಇಲ್ಲಿದೆ.

ಮೈಸೂರು, (ಸೆಪ್ಟೆಂಬರ್ 18): ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಟಿ. ನರಸೀಪುರದಲ್ಲಿ ಮೊದಲ ಬಾರಿಗೆ ಪೊಲೀಸ್ ಠಾಣೆಯ 200 ಮೀಟರ್​ ದೂರದಲ್ಲೇ ಗಣಪತಿ ಪ್ರತಿಷ್ಟಾಪನೆ ಮಾಡಲಾಗಿದೆ. ಅಷ್ಟೇ ಅಲ್ಲ, ಮಸೀದಿ ಇರುವ ಲಿಂಕ್ ರಸ್ತೆಯಲ್ಲೇ ಸೆಪ್ಟೆಂಬರ್ 18ರಂದು ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಕರೆ ಕೊಟ್ಟಿದ್ದರು. ಅದರಂತೆ ಟಿ.ನರಸೀಪುರ ಗಣೇಶನ ಬೃಹತ್ ಶೋಭಾಯಾತ್ರೆಯ ನೇರಪ್ರಸಾರ ಇಲ್ಲಿದೆ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More