ಬಿಜೆಪಿಯವರು ನಮ್ಮ ಪಕ್ಷವನ್ನು ಟೀಕಿಸುವುದು ಬಿಟ್ಟು ಕಣ್ಣೀರು ಸುರಿಸುತ್ತಿರುವ ಈಶ್ವರಪ್ಪರನ್ನು ಸಂತೈಸಲಿ: ಶಿವಕುಮಾರ
ಬಿಜೆಪಿಯವರು ತಮ್ಮಲ್ಲಿರುವ ಪ್ರಮಾದಗಳನ್ನು ಸರಿಪಡಿಸಿಕೊಳ್ಳಲಿ, ಪಾಪ ಈಶ್ವರಪ್ಪ ಕಣ್ಣೀರು ಸುರಿಸುತ್ತಿದ್ದಾನೆ ಎಂದು ಶಿವಕುಮಾರ ಹೇಳಿದರು
ಮೈಸೂರು: ಸೋನಿಯಾ ಗಾಂಧಿ ಅವರನ್ನು ಸ್ವಾಗತಿಸಲು ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದರು. ಭಾರತ್ ಜೋಡೋ ಯಾತ್ರೆಯನ್ನು ಬಿಟ್ಟು ಮೊದಲು ತಮ್ಮ ಪಕ್ಷವನ್ನು ಜೋಡಿಸಿಕೊಳ್ಳುವಂತೆ ಟೀಕಿಸುತ್ತಿರುವ ಬಿಜೆಪಿಗೆ ನಮ್ಮ ಪಕ್ಷದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ತಮ್ಮಲ್ಲಿರುವ ಪ್ರಮಾದಗಳನ್ನು ಅವರು ಸರಿಪಡಿಸಿಕೊಳ್ಳಲಿ, ಪಾಪ ಈಶ್ವರಪ್ಪ (Eshwarappa) ಕಣ್ಣೀರು ಸುರಿಸುತ್ತಿದ್ದಾನೆ ಎಂದು ಶಿವಕುಮಾರ ಹೇಳಿದರು. ರಾಹುಲ್ ಗಾಂಧಿಯವರನ್ನು (Rahul Gandhi) ಯಾರೇ ಲೇವಡಿ ಮಾಡಿದರೂ ಅವರು ನಡೆಸುತ್ತಿರುವ ಯಾತ್ರೆಯ ಮೇಲೆ ಯಾವ ಪರಿಣಾಮವೂ ಬೀರದು ಅಂತ ಶಿವಕುಮಾರ ಹೇಳಿದರು.
Published on: Oct 03, 2022 02:44 PM
Latest Videos