1 ನಿಮಿಷದಲ್ಲಿ 10 ಯೋಗದ ಆಸನ: ವಿಶ್ವ ದಾಖಲೆ ಬರೆದ ಹಾಸನದ ಬಾಲಕಿ

Updated By: ವಿವೇಕ ಬಿರಾದಾರ

Updated on: Jun 21, 2025 | 9:06 PM

ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಹಾಸನದ ಚನ್ನರಾಯಪಟ್ಟಣದ ಕುಮಾರಿ ಪೃಥ್ವಿ ಅವರು ಒಂದು ನಿಮಿಷದಲ್ಲಿ ಹತ್ತು ಕಠಿಣ ಯೋಗಾಸನಗಳನ್ನು ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ಪೃಥ್ವಿ ಅವರು ಸುಮಾರು 600 ಯೋಗಾಸನಗಳನ್ನು ಮಾಡಬಲ್ಲರು. ನಿತ್ಯ ಎರಡು ಗಂಟೆಗಳ ಯೋಗಾಭ್ಯಾಸ ಅವರ ಈ ಸಾಧನೆಗೆ ಕಾರಣ. ಬಾಕ್ಸ್ ಯೋಗ ಮತ್ತು ಶಿವ ಕೈಲಾಸ ಯೋಗದಲ್ಲಿ ಅವರ ಕೌಶಲ್ಯ ವಿಶೇಷವಾಗಿದೆ.

ಅಂತರಾಷ್ಟ್ರೀಯ ಯೋಗ ದಿನಾಚರಣೆಯಂದು ಹಾಸನದ ಓರ್ವ ಬಾಲಕಿ ಕಠಿಣ ಆಸನಗಳನ್ನು ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕುಮಾರಿ ಪೃಥ್ವಿ ಅವರು 1 ನಿಮಿಷದಲ್ಲಿ 10 ಕಠಿಣ ಆಸನ ಮಾಡಿ ವಿಶ್ವ ದಾಖಲೆ ಮಾಡಿದ್ದಾರೆ. ಕುಮಾರಿ ಪೃಥ್ವಿ ಅವರು ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕುಮಾರಿ ಪೃಥ್ವಿ ಅವರು ಸುಮಾರು 600 ಯೋಗದ ಆಸನಗಳನ್ನು ನಿರಾಯಾಸವಾಗಿ ಮಾಡುತ್ತಾರೆ. ಕುಮಾರಿ ಪೃಥ್ವಿ ಅವರು ನಿತ್ಯ ಎರಡು ಗಂಟೆ ಯೋಗಾಭ್ಯಾಸ ಮಾಡಿ ಸಾಧನೆ ಮಾಡಿದ್ದಾರೆ. ವಿಶೇಷವಾಗಿ ಬಾಕ್ಸ್ ಯೋಗ, ಶಿವ ಕೈಲಾಸ ಯೋಗದ ಮೂಲಕ ಗಮನ ಸೆಳೆಯುತ್ತಿದ್ದಾರೆ.