ಹೂಡಿಕೆ ತಜ್ಞರ ಸಲಹೆಯಿಲ್ಲದೆ ಮ್ಯುಚುವಲ್ ಫಂಡ್ ಅಥವಾ ಶೇರುಗಳಲ್ಲಿ ಹಣ ಹೂಡುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎನ್ನತ್ತಾರೆ ಡಾ ಬಾಲಾಜಿ ರಾವ್

ಹೂಡಿಕೆ ತಜ್ಞರು ವೃತ್ತಿಪರರು, ಜನರಿಗೆ ಎಲ್ಲಿ ಹಣ ಹೂಡಬೇಕು ಅಂತ ತಮ್ಮಲ್ಲಿಗೆ ಬರುವ ಜನರಿಗೆ ಸರಿಯಾದ ದಾರಿ ತೋರಿಸುವುದೇ ಅವರ ಕೆಲಸ.

ಹೂಡಿಕೆ ಮಂತ್ರ ಕಾರ್ಯಕ್ರಮದ ಇವತ್ತಿನ ಸಂಚಿಕೆಯಲ್ಲಿ ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಅವರು ನಾವು ಹೂಡಿಕೆ ಸಲಹೆಗಾರನ್ನು ಸಂಪರ್ಕಿಸಬೇಕೇ, ಉತ್ತಮ ಸಲಹೆಗಾರರ ಲಕ್ಷಣಗಳೇನು ಮುಂತಾದ ವಿಷಯಗಳನ್ನು ನಮಗೆ ಮನದಟ್ಟು ಮಾಡಿಸುತ್ತಾರೆ. ನಮಗೆ ಅನಾರೋಗ್ಯವಾದಾಗ ವೈದ್ಯರ ಬಳಿಗೆ ಹೋಗೋದು ಸಹಜ. ಕೆಲವರು ತಮಗೆ ಎಲ್ಲ ಗೊತ್ತಿರುವವರ ಹಾಗೆ ಮೆಡಿಕಲ್ ಸ್ಟೋರ್ ಗೆ ಹೋಗಿ ತಮಗೆ ತಿಳಿದ ಓವರ್ ದಿ ಕೌಂಟರ್ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಇದು ಹೇಗೆ ಅಪಾಯಕಾರಿ ಮತ್ತು ಅನುಚಿತವೋ, ಹಾಗೆಯೇ ಹೂಡಿಕೆ ತಜ್ಞರ ಸಲಹೆಯಿಲ್ಲದೆ ಮ್ಯುಚುವಲ್ ಫಂಡ್ ಅಥವಾ ಶೇರುಗಳಲ್ಲಿ ಹಣ ಹೂಡುವುದು ಸಹ ಸಮಂಜಸವಲ್ಲ ಮತ್ತು ಅಪಾಯಕ್ಕೆ ಆಹ್ವಾನವಿತ್ತಂತೆ ಎಂದು ಡಾ ರಾವ್ ಹೇಳುತ್ತಾರೆ.

ಹೂಡಿಕೆ ತಜ್ಞರು ವೃತ್ತಿಪರರು, ಜನರಿಗೆ ಎಲ್ಲಿ ಹಣ ಹೂಡಬೇಕು ಅಂತ ತಮ್ಮಲ್ಲಿಗೆ ಬರುವ ಜನರಿಗೆ ಸರಿಯಾದ ದಾರಿ ತೋರಿಸುವುದೇ ಅವರ ಕೆಲಸ. ಅವರಿಗೆ ದುಡ್ಡು ಕೊಡಬೇಕಾಗುತ್ತಲ್ಲ ಅಂತ ಪರಿಣಿತರಂತೆ ನಾವೇ ಹೂಡಿಕೆಗೆ ಮಾರ್ಗಗಳನ್ನು ಹುಡುಕಿಕೊಳ್ಳುವುದು ಶುದ್ಧ ತಪ್ಪು ಮತ್ತು ಅದನ್ನು ಮಾಡಲೇಬಾರದು ಎಂದು ಡಾ ರಾವ್ ಹೇಳುತ್ತಾರೆ.

ಹಾಗಾದರೆ ಉತ್ತಮ ಹೂಡಿಕೆ ಸಲಹೆಗಾರರು ಯಾರು? ಅವರನ್ನು ಅಪ್ರೋಚ್ ಮಾಡುವುದು ಹೇಗೆ ಎಂಬ ಗೊಂದಲಗಳನ್ನು ಡಾ ರಾವ್ ನಿವಾರಿಸಿದ್ದಾರೆ. ಯಾವುದೇ ಹೂಡಿಕೆ ತಜ್ಞ ತನ್ನ ಲಾಭದ ಬಗ್ಗೆ ಯೋಚನೆ ಮಾಡದೆ, ನಿಮ್ಮ ಹಣವನ್ನು ಅತ್ಯಂತ ಸೂಕ್ತ, ಸುರಕ್ಷಿತವಾದ ಮತ್ತು ನಿಮಗೆ ಮುಂದಿನ ದಿನಗಳಲ್ಲಿ ಲಾಭದಾಯಕ ಆಗಬಹುದಾದ ಶೇರುಗಳಲ್ಲಿ ಇಲ್ಲವೇ ಮ್ಯಚುವಲ್ ಫಂಡ್ ನಲ್ಲಿ ಹೂಡುತ್ತಾನೆಯೋ ಅವನೇ ಉತ್ತಮ ಸಲಹೆಗಾರ ಮತ್ತು ಹೂಡಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಆಪ್ತಮಿತ್ರ ಎಂದು ಡಾ ಬಾಲಾಜಿ ರಾವ್ ಹೇಳುತ್ತಾರೆ.

ಕೆಲವು ಅತ್ಯುತ್ತಮ ಹೂಡಿಕೆ ಸಲಹೆಗಾರರ ಹೆಸರುಗಳನ್ನು ಡಾ ರಾವ್ ಉಲ್ಲೇಖಿಸಿದ್ದಾರೆ. ಮಂಗಳೂರಿನ ರವೀಶ್, ಬಾಗಲಕೋಟೆಯ ಪ್ರಸಾದ, ಚಾಮರಾಜನಗರದ ಶಂಕರ, ಹೊಳೆನರಸೀಪುರದ ಶ್ರೀನಿವಾಸ ಮತ್ತು ಬೆಂಗಳೂರಿನಲ್ಲಿ ಪ್ರಸಾದ್ ಅಚ್ಚಯ್ಯ ಮೊದಲಾದವರು ನಿಸ್ವಾರ್ಥ ಮನೋಭಾವದಿಂದ ಹೂಡಿಕೆ ಮಾಡಲಿಚ್ಛಿಸುವವರಿಗೆ ಸಲಹೆ ನೀಡುತ್ತಿದ್ದಾರೆ ಎಂದು ಡಾ ರಾವ್ ಹೇಳುತ್ತಾರೆ.

ಇದನ್ನೂ ಓದಿ:   IND vs NZ: ಲೈವ್​ ಮ್ಯಾಚ್​ನಲ್ಲೂ ದೀಪಕ್ ಚಹರ್​ಗೆ ತನ್ನ ಪ್ರೇಯಸಿಯದ್ದೇ ಚಿಂತೆ! ವಿಡಿಯೋ ಸಾಕ್ಷಿ ಇದೆ ನೋಡಿ

Click on your DTH Provider to Add TV9 Kannada