KL Rahul: 1087 ದಿನಗಳ ಬಳಿಕ ಹೀಗೆ ಔಟಾದ ಕೆಎಲ್ ರಾಹುಲ್
IPL 2025 DC vs KKR: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 48ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 204 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 190 ರನ್ಗಳಿಸಲಷ್ಟೇ ಶಕ್ತರಾದರು.
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 48ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 204 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು 190 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 14 ರನ್ಗಳಿಂದ ಸೋಲೊಪ್ಪಿಕೊಂಡಿತು. ಡೆಲ್ಲಿ ಪಡೆಯ ಈ ಸೋಲಿಗೆ ಕೆಎಲ್ ರಾಹುಲ್ ರನೌಟ್ ಆಗಿದ್ದು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು.
ಏಕೆಂದರೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಅನಗತ್ಯ ರನ್ ಕದಿಯುವ ಯತ್ನದಲ್ಲಿ ಕೆಎಲ್ ರಾಹುಲ್ (7) ರನೌಟ್ ಆಗಿ ವಿಕೆಟ್ ಒಪ್ಪಿಸಿದ್ದರು. ರಾಹುಲ್ ಹೀಗೆ ವಿಕೆಟ್ ಕೈಚೆಲ್ಲಿದ್ದು ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ದುಬಾರಿಯಾಯಿತು. ವಿಶೇಷ ಎಂದರೆ ಕೆಎಲ್ಆರ್ ಹೀಗೆ ರನೌಟ್ ಆಗಿರುವುದು 1087 ದಿನಗಳ ಬಳಿಕ.
ಅಂದರೆ 2022 ರಲ್ಲಿ ಕೊನೆಯ ಬಾರಿ ರನೌಟ್ ಆಗಿದ್ದ ರಾಹುಲ್, ರನ್ ಓಡುವಾಗ ಅತೀವ ಎಚ್ಚರಿಕೆ ವಹಿಸುತ್ತಿದ್ದರು. ಆದರೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತೋರಿದ ಆತುರವೇ ಅವರು ವಿಕೆಟ್ ಕಳೆದುಕೊಳ್ಳುವಂತೆ ಮಾಡಿತು. ಅದು ಕೂಡ 1087 ದಿನಗಳ ಬಳಿಕ ರನೌಟ್ ಆಗುವ ಮೂಲಕ ಎಂಬುದೇ ವಿಶೇಷ.
ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?
ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!
ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್ಡಿಕೆ ಲೇವಡಿ
ಕಮಿಷನ್ ಪಡೆಯುವಾಗಲೇ ಶಾಸಕ ಲಾಕ್, ಇಲ್ಲಿದೆ ಎಕ್ಸ್ಕ್ಲೂಸಿವ್ ವಿಡಿಯೋ

