AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs RR: ಜುರೇಲ್ ಸ್ಟಂಪಿಂಗ್​ಗೆ ಸ್ಟನ್ ಆದ ಕ್ರೀಡಾಂಗಣ; ವಿಡಿಯೋ

KKR vs RR: ಜುರೇಲ್ ಸ್ಟಂಪಿಂಗ್​ಗೆ ಸ್ಟನ್ ಆದ ಕ್ರೀಡಾಂಗಣ; ವಿಡಿಯೋ

ಪೃಥ್ವಿಶಂಕರ
|

Updated on: Apr 19, 2026 | 7:05 PM

Share

Dhruv Jurel's Lightning Stumping: ಐಪಿಎಲ್ 2026 ರ KKR vs RR ಪಂದ್ಯದಲ್ಲಿ, ರಾಜಸ್ಥಾನ್ ವಿಕೆಟ್‌ಕೀಪರ್ ಧೃವ್ ಜುರೆಲ್ ಮಿಂಚಿನ ಸ್ಟಂಪಿಂಗ್ ಮೂಲಕ ಎಲ್ಲರನ್ನೂ ದಂಗುಬಡಿಸಿದರು. ಕೆಕೆಆರ್‌ನ ಕ್ಯಾಮರೂನ್ ಗ್ರೀನ್ 27 ರನ್ ಗಳಿಸಿ ಅಪಾಯಕಾರಿಯಾಗಿ ಆಡುತ್ತಿದ್ದಾಗ, ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿ ಜುರೆಲ್ ಎಡಕ್ಕೆ ಡೈವ್ ಮಾಡಿ, ಒಂದು ಕೈಯಿಂದ ಚೆಂಡನ್ನು ಹಿಡಿದು ಸ್ಟಂಪ್ ಮಾಡಿದರು. ಈ ಅಸಾಧಾರಣ ಕ್ಷಣ ಪಂದ್ಯದ ಗತಿಯನ್ನು ಬದಲಿಸಿತು.

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ 156 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್​ ಕೂಡ ಕಳಪೆ ಆರಂಭ ಪಡೆಯಿತು. ಆರಂಭಿಕರಿಬ್ಬರು ಖಾತೆ ತೆರೆಯದೆ ಔಟಾದರು. ಹೀಗಾಗಿ ಕಳೆದ ಪಂದ್ಯದಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಕ್ಯಾಮರೂನ್ ಗ್ರೀನ್ ಮೇಲೆ ಜವಾಬ್ದಾರಿ ಹೆಚ್ಚಿತ್ತು. ಅದರಂತೆ ಗ್ರೀನ್ ಕೂಡ ಉತ್ತಮ ಆರಂಭ ಪಡೆದರು. ಆದರೆ ವಿಕೆಟ್‌ಕೀಪರ್‌ ಧೃವ್ ಜುರೇಲ್ ಅವರ ಮಿಂಚಿನ ಸ್ಟಂಪಿಂಗ್​ಗೆ ಗ್ರೀನ್ ಪೆವಿಲಿಯನ್ ಸೇರಿಕೊಳ್ಳಬೇಕಾಯಿತು.

ಕೆಕೆಆರ್ ಇನ್ನಿಂಗ್ಸ್‌ನ ಐದನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ಮಾಡುತ್ತಿದ್ದರು. ಆ ಓವರ್‌ನ ನಾಲ್ಕನೇ ಎಸೆತದಲ್ಲಿ, ಗ್ರೀನ್ ಫಾರ್ವರ್ಡ್ ಶಾಟ್ ಆಡಲಿದ್ದಾರೆ ಎಂಬುದನ್ನು ಗಮನಿಸಿದ ಬಿಷ್ಣೋಯ್, ಗೂಗ್ಲಿ ಬೌಲಿಂಗ್ ಮಾಡಿದರು. ಇತ್ತ ಬ್ಯಾಟ್ಸ್‌ಮನ್, ವಿಕೆಟ್‌ಕೀಪರ್‌ ಧ್ರುವ್ ಜುರೆಲ್ ಅವರ ಕಣ್ಣ ಮುಂದೆ ಇದ್ದ ಕಾರಣ, ಚೆಂಡು ಯಾವ ದಿಕ್ಕನ್ನು ಹೋಗುತ್ತಿದೆ ಎಂದು ಅವರಿಗೆ ಅರ್ಥವಾಗಲಿಲ್ಲ.

ಆದಾಗ್ಯೂ ಜುರೆಲ್ ಎಡಕ್ಕೆ ಡೈವ್ ಮಾಡಿ, ಚೆಂಡನ್ನು ಹಿಡಿದು, ಒಂದು ಕೈಯಿಂದ ಅದನ್ನು ಸ್ಟಂಪ್‌ಗೆ ಹೊಡೆದರು. ಜುರೆಲ್ ಅವರ ಮಿಂಚಿನ ವೇಗದ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಇಡೀ ಮೈದಾನವೇ ದಂಗಾಯಿತು. ಇತ್ತ ಜುರೆಲ್ ಚುರುಕುತನಕ್ಕೆ ಬಲಿಯಾದ ಗ್ರೀನ್ 13 ಎಸೆತಗಳಲ್ಲಿ 27 ರನ್‌ಗಳಿಸಿ ಔಟಾದರು.

Follow Us