RCB vs MI: W,W,W.. ಆರಂಭದಲ್ಲೇ ಮುಂಬೈಗೆ ಮರ್ಮಾಘಾತ ನೀಡಿದ ಭುವಿ
RCB vs MI IPL 2026: ಐಪಿಎಲ್ 2026 ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್‌ಗಿಳಿದ ಮುಂಬೈಗೆ ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಭಾರಿ ಆಘಾತ ನೀಡಿದರು. ತಮ್ಮ ಮೊದಲ ಎರಡು ಓವರ್‌ಗಳಲ್ಲೇ ಅವರು ರಿಯಾನ್ ರಿಕಲ್ಟನ್, ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ (ಗೋಲ್ಡನ್ ಡಕ್) ಅವರ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸಿ, ಮುಂಬೈ ಇನ್ನಿಂಗ್ಸ್‌ಗೆ ಆರಂಭದಲ್ಲೇ ಆಘಾತ ನೀಡಿದರು.
ಐಪಿಎಲ್ 2026 ರ 54ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ, ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮೊದಲ ಮೂರು ಓವರ್‌ಗಳಲ್ಲೇ ಆಘಾತ ನೀಡಿದರು. ಆರ್‌ಸಿಬಿ ಪರ ಬೌಲಿಂಗ್ ಆರಂಭಿಸಿದ ಭುವಿ, ಓವರ್ನ ಕೊನೆಯ ಎಸೆತದಲ್ಲಿ ಮುಂಬೈ ಆರಂಭಿಕ ರಿಯಾನ್ ರಿಕಲ್ಟನ್ ಅವರ ವಿಕೆಟ್ ಉರುಳಿಸಿದರು. ರಿಕಲ್ಟನ್ ಕೇವಲ 2 ರನ್ ಬಾರಿಸಿ ಔಟಾದರು. ಆ ನಂತರ ಇನ್ನಿಂಗ್ಸ್ನ ಮೂರನೇ ಓವರ್ ಎಸೆಯಲು ಬಂದ ಭುವಿ, ಈ ಓವರ್ನ 5ನೇ ಎಸೆತದಲ್ಲಿ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದರು. ಅದೇ ಓವರ್ನ ಕೊನೆಯ ಎಸೆತದಲ್ಲಿ ಭುವಿಗೆ ಮತ್ತೊಂದು ವಿಕೆಟ್ ಸಿಕ್ಕಿತು. ರೋಹಿತ್ ವಿಕೆಟ್ ಬಳಿಕ ಬಂದಿದ್ದ ನಾಯಕ ಸೂರ್ಯಕುಮಾರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಅಂದರೆ ಸೂರ್ಯ ಗೋಲ್ಡನ್ ಡಕ್ಗೆ ಬಲಿಯಾದರು. ಈ ಮೂಲಕ ಭುವಿ ತಮ್ಮ ಖೋಟಾದ 2 ಓವರ್ಗಳಲ್ಲಿ ಪ್ರಮುಖ 3 ವಿಕೆಟ್ ಉರುಳಿಸಿದರು.

