ನಮ್ಮ ಧರಣಿಯನ್ನು ಬಿಜೆಪಿ ಏನಾದರೂ ಹೇಳಲಿ, ನಮಗೆ ರಾಜ್ಯ ಜನತೆಯ ಬದುಕು ಮುಖ್ಯ: ಡಿಕೆ ಶಿವಕುಮಾರ್, ಡಿಸಿಎಂ

|

Updated on: Feb 07, 2024 | 12:26 PM

ಗುಜರಾತ್ ರಾಜ್ಯಕ್ಕೆ ಎಷ್ಟು ಅನುದಾನ ಹೋಗಿದೆ ಅನ್ನೋದು ಕರ್ನಾಟಕ ಸರ್ಕಾರದ ಪ್ರಶ್ನೆಯಲ್ಲ, ಅದರೆ ಅನುದಾನವನ್ನು ಅಂಕಿ-ಅಂಶಗಳ ಆಧಾರದ ಮೇಲೆ ಸಮಾನವಾಗಿ ಹಂಚಲಿ, ಗುಜರಾತಿಗೆ ನೀಡಿದಷ್ಟು ಅನುದಾನವನ್ನು ಕರ್ನಾಟಕಕ್ಕೆ ನೀಡಿದರೆ, ಅದನ್ನು ಆ ರಾಜ್ಯಕ್ಕಿಂತ ಹೆಚ್ಚು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ, ಹೆಚ್ಚಿನ ಅಭಿವೃದ್ಧಿ ಸಾಧಿಸಿ ತೋರಿಸುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ದೆಹಲಿ: ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ ನಲ್ಲಿ ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ತಮ್ಮನ್ನು ಸುತ್ತುವರೆದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ರಾಜ್ಯ ಸರ್ಕಾರ ನಡೆಸುತ್ತಿರುವ ಪ್ರತಿಭಟನೆಯನ್ನು ಕರ್ನಾಟಕದ ಬಿಜೆಪಿ ನಾಯಕರು (BJP leaders) ಸ್ಟಂಟ್ ಅಂತಾದ್ರೂ ಹೇಳಲಿ ಅಥವಾ ಮತ್ತೇನಾದರೂ ಹೇಳಲಿ, ಅದನ್ನು ತಾವು ಗಣನೆಗೆ ತೆಗೆದುಕೊಳ್ಳೋದಿಲ್ಲ, ವಿಧಾನ ಸಭೆಯಲ್ಲಿ ತಮ್ಮ ಸರ್ಕಾರ ಶ್ವೇತಪತ್ರ (White Paper) ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಹೇಳಿದರು. ಬಿಜೆಪಿಯವರು ಜನರ ಭಾವನೆಗಳೊಂದಿಗೆ ಆಡುತ್ತಿದ್ದಾರೆ ಮತ್ತು ನಾವು ಜನರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿದ್ದೇವೆ, ಗ್ಯಾರಂಟಿಗಳಿಂದಾಗಿ ಖಜಾನೆ ಖಾಲಿಯಾಗಿದೆ ಅಂತ ಅವರು ಹೇಳುತ್ತಿದ್ದಾರೆ, ಆದರೆ ಅಂಥದ್ದೇನೂ ಇಲ್ಲ, ಹೇಗೆ ಸರ್ಕಾರ ನಡೆಸುವುದು ಅಂತ ನಮಗೆ ಗೊತ್ತು ಎಂದು ಹೇಳಿದ ಶಿವಕುಮಾರ್, ತಮ್ಮ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಕೀಳಾಗಿ, ಕೇವಲವಾಗಿ ಮಾತಾಡುವ ಬಿಜೆಪಿ ನಾಯಕರು ತಾವ್ಯಾಕೆ ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಗಲಲ್ಲಿ ಗ್ಯಾರಂಟಿಗಳನ್ನು ಘೋಷಿಸಿದರು ಎಂದು ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on