ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಪಾಲಿನ ಅನುದಾನ ಕೇಳುತ್ತಿದ್ದೇವೆ: ಸತೀಶ್ ಜಾರಕಿಹೊಳಿ, ಸಚಿವ

ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಮ್ಮ ಪಾಲಿನ ಅನುದಾನ ಕೇಳುತ್ತಿದ್ದೇವೆ: ಸತೀಶ್ ಜಾರಕಿಹೊಳಿ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 07, 2024 | 11:08 AM

ಬರ ಪರಿಹಾರ ನಿಧಿಗಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೂರು ಬಾರಿ ದೆಹಲಿಗೆ ಬಂದಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಬಂದು ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಆದರೆ ಇದುವರೆಗೆ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ, ಅನುದಾನ ಬಿಡುಗಡೆಗೆ ಯಾವ ಮಾರ್ಗಸೂಚಿಗಳಿವಿಯೋ ಅವುಗಳನ್ನು ಆಧರಿಸಿ ನಮ್ಮ ಪಾಲು ನಮಗೆ ನೀಡಲಿ ಎಂದು ಜಾರಕಿಹೊಳಿ ಹೇಳಿದರು.

ದೆಹಲಿ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ (Siddaramaiah government) ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ (Jantar Mantar) ಪ್ರತಿಭಟನೆ ನಡೆಸುತ್ತಿದೆ. ಧರಣಿ ಆರಂಭವಾಗುವ ಮೊದಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರೊಂದಿಗೆ ಟಿವಿ9 ದೆಹಲಿ ವರದಿಗಾರ ಮಾತಾಡಿದ್ದಾರೆ. ರಾಜ್ಯ ಸರಕಾರಗಳು ಕೇಂದ್ರದ ನೀತಿಗಳ ವಿರುದ್ಧ ದೆಹಲಿಗೆ ಬಂದು ಸತ್ಯಾಗ್ರಹ ನಡೆಸುವುದು ಇದು ಮೊದಲ ಸಲವೇನಲ್ಲ, ಹಿಂದೆ ಬೇರೆ ಬೇರೆ ರಾಜ್ಯಗಳು ಹೀಗೆ ಮಾಡಿವೆ ಎಂದು ಹೇಳಿದರು. ತಮ್ಮ ಸರ್ಕಾರ ಯಾವುದೋ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಪ್ರತಿಭಟನೆ ಮಾಡುತ್ತಿಲ್ಲ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ, ಅಂಕಿ-ಅಂಶಗಳನ್ನು ಜೊತೆಗಿಟ್ಟುಕೊಂಡು ಇಲ್ಲಿಗೆ ಬಂದಿದ್ದೇವೆ, ಎಂದು ಹೇಳಿದ ಜಾರಕಿಹೊಳಿ ಹಣಕಾಸು ಅಯೋಗದ ಶಿಫಾರಸ್ಸಿನ ಮೇಲೆ ಅನುದಾನ ಹಂಚಿಕೆ ಮಾಡಲಾಗಿದೆ ಅಂತ ಹಣಕಾಸು ಸಚಿವೆ ಹೇಳುತ್ತಾರೆ, ಆದರೆ ದಾಖಲೆಗಳನ್ನು ನೋಡಿದರೆ ರಾಜ್ಯಕ್ಕೆ ಕಡಿಮೆ ಅನುದಾನ ಸಿಕ್ಕಿರುವುದು ಗೊತ್ತಾಗುತ್ತದೆ ಎಂದರು.

ಬರ ಪರಿಹಾರ ನಿಧಿಗಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೂರು ಬಾರಿ ದೆಹಲಿಗೆ ಬಂದಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಮ್ಮೆ ಬಂದು ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿಯವರನ್ನು ಭೇಟಿಯಾಗಿದ್ದಾರೆ. ಆದರೆ ಇದುವರೆಗೆ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ, ಅನುದಾನ ಬಿಡುಗಡೆಗೆ ಯಾವ ಮಾರ್ಗಸೂಚಿಗಳಿವಿಯೋ ಅವುಗಳನ್ನು ಆಧರಿಸಿ ನಮ್ಮ ಪಾಲು ನಮಗೆ ನೀಡಲಿ ಎಂದು ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ