ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದಾರಾ ಗಿಲ್ಲಿ ನಟ?

Updated on: Feb 09, 2026 | 6:59 PM

ಗಿಲ್ಲಿ ನಟ ಅಭಿನಯಿಸಿದ ‘ಸೂಪರ್ ಹಿಟ್’ ಚಿತ್ರದ ಪ್ರೆಸ್​ ಮೀಟ್ ಸೋಮವಾರ (ಫೆಬ್ರವರಿ 9) ನಡೆಯಿತು. ಆ ಬಳಿಕ ಗಿಲ್ಲಿ ಅವರಿಗೆ ಕಾವ್ಯಾ ಶೈವ ಬಗ್ಗೆ ಪ್ರಶ್ನೆ ಎದುರಾಯಿತು. ‘ಕಾವ್ಯಾ ಜತೆ ನೀವು ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದೀರಂತೆ ಹೌದಾ?’ ಎಂದು ಪ್ರಶ್ನಿಸಲಾಯಿತು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada) ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯಾ ಶೈವ ಜೊತೆ ಕ್ಲೋಸ್ ಆಗಿದ್ದರು. ಶೋ ಮುಗಿದ ನಂತರವೂ ಆ ಸ್ನೇಹ ಮುಂದುವರಿದಿದೆ. ಈಗ ಗಿಲ್ಲಿ ನಟ ಅಭಿನಯದ ‘ಸೂಪರ್ ಹಿಟ್’ ಸಿನಿಮಾದ ಸುದ್ದಿಗೋಷ್ಠಿ ಸೋಮವಾರ (ಫೆ.9) ನಡೆಯಿತು. ಆ ಬಳಿಕ ಅವರಿಗೆ ಕಾವ್ಯಾ (Kavya Shaiva) ಬಗ್ಗೆ ಪ್ರಶ್ನೆ ಎದುರಾಯಿತು. ‘ಕಾವ್ಯಾ ಜೊತೆ ಪ್ರತಿ ದಿನ ಫೋನಲ್ಲಿ ಮಾತಾಡುತ್ತಿದ್ದೀರಂತೆ ಹೌದಾ?’ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಗಿಲ್ಲಿ ಅವರು ಜಾಣತನದ ಉತ್ತರ ನೀಡಿದರು. ‘ನಿಮ್ಮ ಜೊತೆಯೂ ಸುಮಾರು ಸಲ ಮಾತನಾಡಿದ್​ದೇನೆ. ನೀವು ಎಷ್ಟೋ ಸಲ ನನಗೆ ಫೋನ್ ಮಾಡಿದ್ದೀರಿ. ನಾನು ಕೂಡ ಮಾಡಿದ್ದೇನೆ’ ಎಂದು ಗಿಲ್ಲಿ ನಟ (Gilli Nata) ಹೇಳಿದರು. ಆ ಮೂಲಕ ಕಾವ್ಯಾ ಜೊತೆಗಿನ ತಮ್ಮ ಮಾತಕಥೆ ತಂಬ ಸಹಜವಾದದ್ದು ಎಂಬರ್ಥದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಆ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More