AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ

‘ಸರ್ಕಾರಿ ಶಾಲೆ ಹೆಚ್8’ ಸಿನಿಮಾದಲ್ಲಿ ಗಿಲ್ಲಿ ನಟ ಅಭಿನಯಿಸಿದ್ದಾರೆ. ಆದರೆ ಅದರ ಪ್ರಚಾರದಲ್ಲಿ ಅವರು ಭಾಗಿಯಾಗಿಲ್ಲ. ಹಾಗಾಗಿ ಗಿಲ್ಲಿ ವಿರುದ್ಧ ಚಿತ್ರತಂಡದವರು ಗರಂ ಆಗಿ, ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಅದಕ್ಕೆ ಗಿಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಜಾಗದಲ್ಲಿ ಇದ್ದವರಿಗೆ ಮಾತ್ರ ನನ್ನ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ’ ಎಂದು ಗಿಲ್ಲಿ ನಟ ಹೇಳಿದ್ದಾರೆ.

ತಮ್ಮದೇ ಸಿನಿಮಾ ಪ್ರಚಾರಕ್ಕೆ ಗಿಲ್ಲಿ ನಟ ಯಾಕೆ ಹೋಗಿಲ್ಲ? ಕೊನೆಗೂ ಸಿಕ್ತು ಉತ್ತರ
Gilli Nata
ಮದನ್​ ಕುಮಾರ್​
|

Updated on:Feb 09, 2026 | 6:52 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಿಂದ ಗಿಲ್ಲಿ ನಟ ಪಡೆದ ಜನಪ್ರಿಯತೆ ಅಪಾರ. ಆ ರಿಯಾಲಿಟಿ ಶೋಗೆ ಹೋಗುವುದಕ್ಕೂ ಮುನ್ನವೇ ಗಿಲ್ಲಿ ಅವರು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈಗ ಆ ಸಿನಿಮಾಗಳ ಬಗ್ಗೆ ಟಾಕ್ ಶುರು ಆಗಿದೆ. ಗಿಲ್ಲಿ ನಟ (Gilli Nata) ಅಭಿನಯದ ‘ಸರ್ಕಾರಿ ಶಾಲೆ ಹೆಚ್​8’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯಿತು. ಆ ಚಿತ್ರದಲ್ಲಿ ಗಿಲ್ಲಿ ಅವರಿಗೆ ಒಂದು ಪಾತ್ರವಿದೆ. ಆದರೆ ಸಿನಿಮಾದ ಪ್ರಚಾರಕ್ಕೆ ಗಿಲ್ಲಿ ನಟ ಬಂದಿಲ್ಲ ಎಂದು ಚಿತ್ರತಂಡ ಗರಂ ಆಗಿದೆ. ಕರ್ನಾಟಕ ಚಲನಚಿತ್​ರ ವಾಣಿಜ್ಯ ಮಂಡಳಿಗೆ ದೂರು ಕೂಡ ನೀಡಲಾಗಿದೆ. ಆ ಬಗ್ಗೆ ಗಿಲ್ಲಿ ನಟ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಹಿಟ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಅವರಿಗೆ ಹಲವು ಪ್ರಶ್ನೆ ಎದುರಾಯಿತು. ‘ಸರ್ಕಾರಿ ಶಾಲೆ ಹೆಚ್​8’ ಚಿತ್ರದ ಪ್ರಚಾರಕ್ಕೆ ಯಾಕೆ ಹೋಗಿಲ್ಲ ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದರು.

‘ಸರ್ಕಾರಿ ಶಾಲೆ ಹೆಚ್​8 ಸಿನಿಮಾ ಮಾಡಿ ನನ್ನ ಪ್ರಕಾರ 2ರಿಂದ ಎರಡೂವರೆ ವರ್ಷ ಆಗಿರಬಹುದು. ಅದರಲ್ಲಿ ನಟನೆ ಮಾಡಿದ್ದೇನೆ. ನಾನು ನನ್ನ ಬೈಟ್ಸ್ ಕಳಿಸಿದ್ದೇನೆ. ಹಾಗಿದ್ದರೂ ಕೂಡ ಅವರು ಯಾಕೆ ದೂರು ನೀಡಿದರೋ ಗೊತ್ತಿಲ್ಲ. ನನಗೂ ಒಂದಷ್ಟು ಕೆಲಸಗಳ ಒತ್ತಡ ಇತ್ತು. ನಾನು ಫೋನ್ ಎತ್ತಿಲ್ಲ ಎಂಬ ಕಾರಣಕ್ಕೆ ಪಾಪ ಅವರಿಗೆ ಆ ರೀತಿ ಆಗಿರಬಹುದು. ಅವರದ್ದು ತಪ್ಪಿಲ್ಲ’ ಎಂದು ಗಿಲ್ಲಿ ನಟ ಹೇಳಿದ್ದಾರೆ.’

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ತಮ್ಮ ವಿರುದ್ಧ ದೂರು ದಾಖಲಾಗಿದ್ದರೂ ಕೂಡ ಗಿಲ್ಲಿ ನಟ ಅವರು ‘ಸರ್ಕಾರಿ ಶಾಲೆ ಹೆಚ್8’ ಚಿತ್ರತಂಡವನ್ನು ಸಂಪರ್ಕಿಸಲಿಲ್ಲ. ‘ಬೇರೆ ಕೆಲಸಗಳಲ್ಲಿ ನಾನು ಒಂದಷ್ಟು ಬ್ಯುಸಿ ಆದೆ. ವಾಣಿಜ್ಯ ಮಂಡಳಿಗೆ ನಾನು ಉತ್ತರ ಕೊಡಬೇಕಿತ್ತು. ಅದನ್ನು ನೀಡಿದ್ದೇನೆ’ ಎಂದು ಗಿಲ್ಲಿ ನಟ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮುಗಿದು ಇಷ್ಟು ದಿನವಾದ್ರೂ ಕಡಿಮೆ ಆಗಿಲ್ಲ ಗಿಲ್ಲಿ ನಟ ಹವಾ

ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅನೇಕರು ಫಿದಾ ಆಗಿದ್ದರು. ಹಲವು ಅಭಿಮಾನಿಗಳು ಗಿಲ್ಲಿಯ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದರು. ಆ ಪೈಕಿ ಒಬ್ಬ ಅಭಿಮಾನಿಯನ್ನು ಭೇಟಿ ಆಗುವುದಾಗಿ ಗಿಲ್ಲಿ ಹೇಳಿದ್ದರು. ಆದರೆ ಬಿಗ್ ಬಾಸ್ ಮುಗಿದು ಇಷ್ಟು ದಿನ ಕಳೆದರೂ ಆ ಅಭಿಮಾನಿಯನ್ನು ಗಿಲ್ಲಿ ಭೇಟಿ ಆಗಿಲ್ಲ. ಅದಕ್ಕೂ ಅವರು ಸ್ಪಷ್ಟನೆ ನೀಡಿದ್ದಾರೆ. ‘ವಾಹಿನಿ ಕಡೆಯಿಂದ ಅವರೆಲ್ಲರನ್ನೂ ಕರೆಸಲು ಪ್ಲ್ಯಾನ್ ಆಗಿತ್ತು. ಆ ಅಭಿಮಾನಿಗೂ ಕರೆ ಮಾಡಲಾಗಿತ್ತು. ಆದರೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲರನ್ನೂ ಭೇಟಿ ಆಗುತ್ತೇನೆ. ತಕ್ಷಣಕ್ಕೆ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದಿದ್ದಾರೆ ಗಿಲ್ಲಿ ನಟ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:46 pm, Mon, 9 February 26

Follow Us
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಚಿಕ್ಕಮಗಳೂರು: 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ರಾಜ್ಯಾದ್ಯಂತ ಮೆಡಿಕಲ್ ಸ್ಟೋರ್‌ಗಳ ಪರಿಶೀಲನೆಗೆ ಮಹತ್ವದ ಆದೇಶ
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವಿಶೇಷ ಭೂಸ್ವಾಧೀನಾಧಿಕಾರಿ ಮನೆಯಲ್ಲಿ ಕೋಟಿಗಟ್ಟಲೆ ಆಸ್ತಿ ಪತ್ತೆ!
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ವರಮಹಾಲಕ್ಷ್ಮೀ ಹಬ್ಬದ ಖರೀದಿಗೆ ಮಾರ್ಕೆಟ್‌ನಲ್ಲಿ ಜನಸಾಗರ: ಟ್ರಾಫಿಕ್ ಜಾಮ್
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಈ ರಾಶಿಯವರಿಗೆ ಗಜಕೇಸರಿ ಯೋಗ, ವೃಶ್ಚಿಕಕ್ಕೆ ಧನಯೋಗ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ