ನಾಯಿ ಮಾಂಸನಾ? ಕುರಿ ಮಾಂಸ ನಾ? ವರದಿ ಬರುವ ಮೊದಲೇ ಸರ್ಟೀಫಿಕೆಟ್ ಕೊಟ್ಟ ಗೃಹ ಸಚಿವ
ಬೆಂಗಳೂರಿನಲ್ಲಿ ನಾಯಿ ಮಾಂಸ ಸೇಲ್ ಮಾಡಲಾಗುತ್ತಿದೆ ಅನ್ನೋ ಆರೋಪ ಇಡೀ ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿರುವುದು ಒಂದು ಕಡೆಯಾದರೆ. ಅದು ನಾಯಿ ಮಾಂಸನಾ ಅಥವಾ ಕುರಿ ಮಾಂಸ ಎಂಬ ಚರ್ಚೆ ಮತ್ತೊಂದು ಕಡೆ. ಸದ್ಯ ಅದರ ಪರೀಕ್ಷೆಗೆ ಆಹಾರ ಇಲಾಖೆ ಮುಂದಾಗಿದೆ. ಈ ಮಧ್ಯೆ ಅದು ಕುರಿ ಮಾಂಸ ಎಂದು ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ದಾವಣಗೆರೆ, ಜುಲೈ 28: ಜೈಪುರದಿಂದ ಬಂದಿದ್ದ ಲೋಡ್ಗಟ್ಟಲೇ ಬಾಕ್ಸ್ಗಳು ಶುಕ್ರವಾರ ಮೆಜೆಸ್ಟಿಕ್ನಲ್ಲಿ ಅನ್ಲೋಡ್ ಆಗುತ್ತಿದ್ದಂತೆ ಪುನೀತ್ ಕೆರೆಹಳ್ಳಿ ತಂಡ ದಾಳಿ ಮಾಡಿತ್ತು. ಬಾಕ್ಸ್ಗಳಲ್ಲಿ ಇರೋದು ನಾಯಿ ಮಾಂಸ (Dog Meat). ಕುರಿ ಮಾಂಸದ ಜೊತೆ ನಾಯಿ ಮಾಂಸವನ್ನೂ ಮಿಕ್ಸ್ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದ್ದು, ಇದು ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. ಸದ್ಯ ನಾಯಿ ಅಥವಾ ಕುರಿ ಮಾಂಸ ಎಂದು ಸಾಕಷ್ಟು ಚರ್ಚೆ ನಡೆಯುತ್ತಿದೆ. ಆಹಾರ ಇಲಾಖೆ ಮಾಂಸವನ್ನು ಪರಿಕ್ಷೆಗೆ ಕೂಡ ಕಳುಹಿಸಿದೆ. ಇದರ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅದು ಕುರಿ ಮಾಂಸ ಎಂದು ವರದಿ ಬರುವ ಮೊದಲೇ ಸರ್ಟೀಫಿಕೆಟ್ ಕೊಟ್ಟಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.