AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಇರಾನ್ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

Video: ಇರಾನ್ ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ನಯನಾ ರಾಜೀವ್
|

Updated on: Jun 17, 2025 | 9:39 AM

Share

ಇಸ್ರೇಲಿ ವಾಯುಪಡೆ ಟೆಹ್ರಾನ್​​ನಲ್ಲಿರುವ ಇರಾನ್ ಸ್ಟೇಟ್ ಬ್ರಾಡ್​ಕಾಸ್ಟರ್​​ ಏಜೆನ್ಸಿ IRIB ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿದೆ. ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ದಾಳಿ ನಡೆದಿದೆ. ಈ ದಾಳಿಯು IRIB ಪ್ರಸಾರಕ್ಕೆ ಅಡ್ಡಿಯುಂಟು ಮಾಡಿತ್ತು. ಈ ವಿಡಿಯೋದಲ್ಲಿ ಕಚೇರಿಗೆ ಮೇಲೆ ನಡೆದ ದಾಳಿಯನ್ನು ಕಾಣಬಹುದು. ಇಸ್ರೇಲ್ ರಕ್ಷಣಾ ಪಡೆ (IDF) ಈ ಹಿಂದೆ IRIB ಪ್ರಧಾನ ಕಚೇರಿಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಎಚ್ಚರಿಕೆಯನ್ನು ನೀಡಿತ್ತು.ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ದಾಳಿ ನಡೆದಿದೆ

ಟೆಹ್ರಾನ್, ಜೂನ್ 17: ಇಸ್ರೇಲಿ ವಾಯುಪಡೆ ಟೆಹ್ರಾನ್​​ನಲ್ಲಿರುವ ಇರಾನ್ ಸ್ಟೇಟ್ ಬ್ರಾಡ್​ಕಾಸ್ಟರ್​​ ಏಜೆನ್ಸಿ IRIB ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿದೆ. ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ದಾಳಿ ನಡೆದಿದೆ. ಈ ದಾಳಿಯು IRIB ಪ್ರಸಾರಕ್ಕೆ ಅಡ್ಡಿಯುಂಟು ಮಾಡಿತ್ತು. ಈ ವಿಡಿಯೋದಲ್ಲಿ ಕಚೇರಿಗೆ ಮೇಲೆ ನಡೆದ ದಾಳಿಯನ್ನು ಕಾಣಬಹುದು. ಇಸ್ರೇಲ್ ರಕ್ಷಣಾ ಪಡೆ (IDF) ಈ ಹಿಂದೆ IRIB ಪ್ರಧಾನ ಕಚೇರಿಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಎಚ್ಚರಿಕೆಯನ್ನು ನೀಡಿತ್ತು.ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ದಾಳಿ ನಡೆದಿದೆ. ವರದಿಗಳ ಪ್ರಕಾರ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಶೀಘ್ರದಲ್ಲೇ ಮಾತುಕತೆಗಳನ್ನು ಪುನರಾರಂಭಿಸುವ ಬಯಕೆಯನ್ನು ಇರಾನ್ ವ್ಯಕ್ತಪಡಿಸಿದೆ. ಮೂಲಗಳನ್ನು ಉಲ್ಲೇಖಿಸಿ ವರದಿಯ ಪ್ರಕಾರ, ಇರಾನ್ ಇಸ್ರೇಲ್ ಮತ್ತು ಅಮೆರಿಕಕ್ಕೆ ಅರಬ್ ಮಧ್ಯವರ್ತಿಗಳ ಮೂಲಕ ಸಂದೇಶವನ್ನು ಕಳುಹಿಸಿದೆ, ಅಮೆರಿಕ ಯುದ್ಧದಲ್ಲಿ ಭಾಗಿಯಾಗದಿದ್ದರೆ ದಾಳಿಯನ್ನು ಕೊನೆಗೊಳಿಸಿ ಮಾತುಕತೆಗೆ ಮರಳಲು ಸಿದ್ಧವಾಗಿದೆ ಎಂದು ಹೇಳುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ