AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!

VIDEO: ಎರಡಂಕಿ ಸ್ಕೋರ್​ಗೆ ಆಲೌಟ್: RCB ದಾಖಲೆ ಸೇಫ್..!

ಝಾಹಿರ್ ಯೂಸುಫ್
|

Updated on:Jun 17, 2025 | 10:54 AM

Share

IPL Lowest Score: ವಿಶ್ವದ ಪ್ರಮುಖ ಟಿ20 ಲೀಗ್​ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. 2017 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡವು ಕೇವಲ 49 ರನ್​ಗಳಿಗೆ ಆಲೌಟ್ ಆಗಿದ್ದರು. ಇದು ಐಪಿಎಲ್ ಇತಿಹಾಸದ ಅತ್ಯಂತ ಕನಿಷ್ಠ ಸ್ಕೋರ್. 

ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಟಿ20 ಟೂರ್ನಿಯ 7ನೇ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ಕ್ಯಾಲಿಫೋರ್ನಿಯಾದ ಓಕ್​ಲ್ಯಾಂಡ್ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ಸಿಯಾಟಲ್ ಓರ್ಕಾಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಸಿಯಾಟಲ್ ಓರ್ಕಾಸ್ ತಂಡದ ನಾಯಕ ಹೆನ್ರಿಕ್ ಕ್ಲಾಸೆನ್ ಟಿಎಸ್​ಕೆ ತಂಡವನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ 9 ರನ್​ಗಳಿಸಿ ಔಟಾದರೆ, ಕೈಲ್ ಮೇಯರ್ಸ್ (0) ಶೂನ್ಯದೊಂದಿಗೆ ಮರಳಿದ್ದರು. ಇದರ ಬೆನ್ನಲ್ಲೇ ಸ್ಟೀವ್ ಟೇಲರ್ (4) ಕೂಡ ಔಟಾದರು.

ಇತ್ತ ಆರಂಭಿಕ ಆಘಾತದಿಂದ ಪಾರಾಗುವ ಮುನ್ನವೇ ಸಿಯಾಟಲ್ ಓರ್ಕಾಸ್ ತಂಡದ ನಾಯಕ ಹೆನ್ರಿಕ್ ಕ್ಲಾಸೆನ್ (0) ಕ್ಲೀನ್ ಬೌಲ್ಡ್ ಆದರು. ಆ ಬಳಿಕ ಸಿಕಂದರ್ ರಾಝ 4 ರನ್​ಗಳಿಸಿದರೆ, ಸುಜಿತ್ ನಾಯಕ್ 5 ರನ್​ಗಳಿಸಲಷ್ಟೇ ಶಕ್ತರಾದರು. ಪರಿಣಾಮ ಕೇವಲ 27 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಹಂತದಲ್ಲಿ ಕ್ರೀಸ್ ಕಚ್ಚಿ ಆಡುವ ಪ್ರಯತ್ನ ಮಾಡಿದ ಆರೋನ್ ಜೋನ್ಸ್ 17 ಎಸೆತಗಳಲ್ಲಿ 17 ರನ್ ಬಾರಿಸಿ ತಂಡದ ಮೊತ್ತವನ್ನು 50ರ ಗಡಿದಾಟಿಸಿದರು. ಅಂತಿಮವಾಗಿ 60 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ ಸಿಯಾಟಲ್ ಓರ್ಕಾಸ್ ಮೇಜರ್ ಲೀಗ್ ಕ್ರಿಕೆಟ್ 2025ರ ಟೂರ್ನಿಯಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ತಂಡ ಎನಿಸಿಕೊಂಡಿತು. ಇನ್ನು 93 ರನ್​ಗಳ ಭರ್ಜರಿ ಜಯ ಸಾಧಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಝಿಯಾ ಉಲ್ ಹಕ್, ನಾಂಡ್ರೆ ಬರ್ಗರ್ ಹಾಗೂ ನೂರ್ ಅಹ್ಮದ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು.

RCB ಕಳಪೆ ದಾಖಲೆ ಸೇಫ್:

ವಿಶ್ವದ ಪ್ರಮುಖ ಟಿ20 ಲೀಗ್​ನಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಕಳಪೆ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. 2017 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ RCB ತಂಡವು ಕೇವಲ 49 ರನ್​ಗಳಿಗೆ ಆಲೌಟ್ ಆಗಿದ್ದರು. ಇದು ಐಪಿಎಲ್ ಇತಿಹಾಸದ ಅತ್ಯಂತ ಕನಿಷ್ಠ ಸ್ಕೋರ್.

ಇತ್ತ ಮೇಜರ್ ಲೀಗ್ ಕ್ರಿಕೆಟ್​ನಲ್ಲಿ ಸಿಯಾಟಲ್ ಓರ್ಕಾಸ್ ತಂಡವು 27 ರನ್​ಗಳಿಗೆ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಆರ್​ಸಿಬಿ ತಂಡದ ದಾಖಲೆಯನ್ನು ಅಳಿಸಿ ಹಾಕುವ ಸೂಚನೆ ನೀಡಿದರೂ, ಅಂತಿಮವಾಗಿ 60 ರನ್​ಗಳಿಸುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ 8 ವರ್ಷಗಳ ಹಿಂದೆ ಆರ್​ಸಿಬಿ ಬರೆದ ಹೀನಾಯ ದಾಖಲೆ, ಇನ್ನೂ ಸಹ ಕಳಪೆ ದಾಖಲೆಯಾಗಿಯೇ ಉಳಿದಿದೆ.

 

 

Published on: Jun 17, 2025 10:53 AM