ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಳ್ಳುವ ಬದಲು ಎಸ್ಐಟಿ ಮುಂದೆ ಹಾಜರಾಗೋದು ಸೂಕ್ತ: ನಿಖಿಲ್ ಕುಮಾರಸ್ವಾಮಿ

|

Updated on: May 20, 2024 | 12:32 PM

ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಅವರು ಆರೋಪಿಯಾಗಿರುವುದರಿಂದ ಎಲ್ಲೇ ಇದ್ದರೂ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಹಾಜರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಯಾವುದೋ ದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವುದು ಸರಿಯಲ್ಲ ಎಂದು ನಿಖಿಲ್ ಹೇಳಿದರು. ಅವರು ತನ್ನ ಸಂಪರ್ಕದಲ್ಲಿಲ್ಲ ಮತ್ತು ತಾನ್ಯಾವತ್ತೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ನಿಖಿಲ್ ಪುನರುಚ್ಛರಿಸಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಪ್ರಶ್ನೆ ಕೇಳಿದಾಗ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿಯವರಿಗೆ (Nikhil Kumaraswamy) ಮುಜುಗುರ ಉಂಟಾಗೋದು ಸಹಜವೇ. ಆದರೆ, ವಿಡಿಯೋ, ಪೆನ್ ಡ್ರೈವ್ ಗಳು ಹೊರಬಿದ್ದು ಮತ್ತು ಪ್ರಜ್ವಲ್ ಸಹ ದೇಶದಿಂದ ಹೊರಬಿದ್ದು ತಿಂಗಳು ಕಳೆದಿರುವುದರಿಂದ ಈಗ ಅಂಥ ಸನ್ನಿವೇಶವೇನೂ ಸೃಷ್ಟಿಯಾಗಲ್ಲ. ನಿಖಿಲ್ ಅವರಿಗೆ ಇಂದು ಬೆಂಗಳೂರಲ್ಲಿ ಪ್ರಜ್ವಲ್ ಬಗ್ಗೆ ಪ್ರಶ್ನೆ ಕೇಳಿದಾಗ ಯಾವುದೇ ಗೊಂದಲವಿಲ್ಲದೆ ಉತ್ತರಿಸಿದರು. ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋಗಳ ಪ್ರಕರಣದಲ್ಲಿ ಕುಮಾರಸ್ವಾಮಿಯವರು ಮೊದಲ ದಿನವೇ, ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಹೇಳಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಅವರು ಆರೋಪಿಯಾಗಿರುವುದರಿಂದ ಎಲ್ಲೇ ಇದ್ದರೂ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಂದೆ ಹಾಜರಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಯಾವುದೋ ದೇಶಕ್ಕೆ ಹೋಗಿ ತಲೆಮರೆಸಿಕೊಳ್ಳುವುದು ಸರಿಯಲ್ಲ ಎಂದು ನಿಖಿಲ್ ಹೇಳಿದರು. ಅವರು ತನ್ನ ಸಂಪರ್ಕದಲ್ಲಿಲ್ಲ ಮತ್ತು ತಾನ್ಯಾವತ್ತೂ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದು ನಿಖಿಲ್ ಪುನರುಚ್ಛರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಒಬ್ಬ ಮಾಜಿ ಪ್ರಧಾನಿಯ ಸಾವು ಬಯಸುವ ಶಿವರಾಮೇಗೌಡ ಸಂಸ್ಕೃತಿಹೀನ ವ್ಯಕ್ತಿ: ನಿಖಿಲ್ ಕುಮಾರಸ್ವಾಮಿ

Follow us on