ಪೆಟ್ಗಳಿಗೂ ಬಂದವು ಡಿಸೈನರ್ ಉಡುಗೆಗಳು, ನಾವು ತೊಡುವ ಬಟ್ಟೆಗಳಿಗಿಂತ ನಾಯಿ ಸಂತತಿ ಉಡುಗೆಗಳೇ ದುಬಾರಿ!
ವಿಧವಿಧದ ಉಡುಗೆಗಳನ್ನು ತೊಟ್ಟ ನಾಯಿಗಳು ಕೆಮೆರಾಗಳಿಗೆ ಪೋಸು ನೀಡಿರುವ ದೃಶ್ಯ ಅಪ್ಯಾಯಮಾನ ಅನಿಸುತ್ತಿದೆ.
ನಿಮ್ಮ ಸ್ನೇಹಿತ ಇಲ್ಲವೆ ನಿಮ್ಮ ಗರ್ಲ್ಫ್ರೆಂಡನ್ನು ನಿಮ್ಮ ವಾರ್ಡ್ರೋಬ್ ಮುಂದೆ ಕರೆದೊಯ್ದು ನಿಮಗೆ ಇಷ್ಟವಾಗುವ ಡ್ರೆಸ್ ಒಂದನ್ನು ತೋರಿಸಿ, ‘ಇದು ನನ್ನ ಈಗ ಪೆಟ್ ಡ್ರೆಸ್,’ ಅಂತ ಹೇಳಬೇಡಿ ಮಾರಾಯ್ರೇ! ಯಾಕೆ ಗೊತ್ತಾ? ಪೆಟ್ಸ್ ಗೂ ಈಗ ಡಿಸೈನರ್ ಡ್ರೆಸ್ ಬಂದುಬಿಟ್ಟಿವೆ. ಇವನೇನು ನಾಯಿ ಬಟ್ಟೆಗಳನ್ನೂ ತನ್ನ ಬಟ್ಟೆಗಳೊಂದಿಗೆ ಇಟ್ಟುಕೊಂಡಿದ್ದಾನೆ ಅಂತ ನಿಮ್ಮ ಸ್ನೇಹಿತರು ಅಂದುಕೊಂಡಾರು! ಇಟಲಿಯ ಫ್ಯಾಶನ್ ಹೌಸ್ ಮೊಶಿನೊ ಬಗ್ಗೆ ನೀವು ಕೇಳಿಸಿಕೊಂಡಿರುತ್ತೀರಿ. ಇದಕ್ಕೆ ಅಮೆರಿಕದ ಜೆರಿಮಿ ಸ್ಕಾಟ್ ಅನ್ನುವವರು ಫ್ಯಾಶನ್ ಡಿಸೈನರ್ ಮತ್ತು ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ. ಇವರು ಮೊಶಿನೊ ಫ್ಯಾಶನ್ ಹೌಸ್ನಿಂದ ನಾಯಿಗಳಿಗೂ ಪೆಟ್ ಲೈನ್ ಲಾಂಚ್ ಮಾಡಿದ್ದು, ಇದರಲ್ಲಿ ಜೆರ್ಸಿ ಟಿ-ಶರ್ಟ್, ಬೈಕರ್ ಜ್ಯಾಕೆಟ್, ಟ್ರೆಂಚ್ ಕೋಟು ಮತ್ತು ಇತರ ಆಕ್ಸೆಸರಿಗಳು ಸೇರಿವೆ.
ನಾಯಿಗಳಿಗೆ ಬಟ್ಟೆಗಳನ್ನು ಡಿಸೈನ್ ಮಾಡಿ ಲಾಂಚ್ ಮಾಡಿದ ಸಂತಸವನ್ನು ಜೆರಿಮಿ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ‘ಈ ಸಂಗತಿಯನ್ನು ಹಂಚಿಕೊಳ್ಳಲು ನನಗೆ ಅತೀವ ಸಂತೋಷ ಮತ್ತು ರೋಮಾಂಚನವಾಗುತ್ತಿದೆ. ಮೊಶಿನೊ ಪೆಟ್ ಲೈನ್ ನಾನು ವಿನ್ಯಾಸಗೊಳಿಸಿದ್ದೇನೆ. ನಮ್ಮ ಫ್ಯಾಶನ್ ಹೌಸ್ನ ಉಡುಗೆಗಳನ್ನು ಕೆಲ ಪ್ರತಿಷ್ಠಿತ ಮನೆಗಳ ಮುದ್ದಿನ ನಾಯಿಗಳು ಎಂಡಾರ್ಸ್ ಮಾಡಿವೆ,’ ಅಂತ ಅವರು ಬರೆದಿದ್ದಾರೆ.
ವಿಧವಿಧದ ಉಡುಗೆಗಳನ್ನು ತೊಟ್ಟ ನಾಯಿಗಳು ಕೆಮೆರಾಗಳಿಗೆ ಪೋಸು ನೀಡಿರುವ ದೃಶ್ಯ ಅಪ್ಯಾಯಮಾನ ಅನಿಸುತ್ತಿದೆ. ನೀವೇ ನೋಡಿ. ಇವುಗಳಲ್ಲಿ ಒಂದು ನಾಯಿ ಟ್ವಿಲ್ ಜಾಕೆಟ್ ಧರಿಸಿದೆ. ಅಂದಹಾಗೆ ಅದರ ಬೆಲೆ ಎಷ್ಟು ಗೊತ್ತಾ? ರೂ. 33,459 ಮಾತ್ರ! ಆಲಿವ್ ಹಸಿರು ಬಣ್ಣದ ಜಾಕೆಟನ್ನು ಪಾಲಿಯೆಸ್ಟರ್ ಬಟ್ಟೆಯಿಂದ ತಯಾರಿಸಲಾಗಿದ್ದು ಕಂಪನಿಯ ಲೊಗೊ ಬೆನ್ನ ಮೇಲೆ ಬಂದಿದೆ.
ಇದನ್ನೂ ಓದಿ: ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಪಿಡಬ್ಲೂಡಿ ಶಾಂತಗೌಡ; ವಿಡಿಯೋ ನೋಡಿ