Loading video

ಉಗ್ರರು, ಪಾಕಿಸ್ತಾನದ ವಿರುದ್ಧ ಕಾರ್ಯೋನ್ಮುಖರಾಗುವುದಷ್ಟೇ ನಮ್ಮ ಮುಂದಿರುವ ವಿಚಾರ: ಡಾ ಮಂಜುನಾಥ್

Updated on: Apr 29, 2025 | 5:59 PM

ಇಂದು ಬೆಳಗ್ಗೆ ಮಾಧ್ಯಮದವರೊಂದಿಗೆ ಮಾತಾಡಿದ್ದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಸಹ ಪಹಲ್ಲಾಮ್ ಉಗ್ರರ ದಾಳಿ ಹಿನ್ನಲೆಯಲ್ಲಿ ಕಾಂಗ್ರೆಸ್ ನಿಲುವಿನ ಬಗ್ಗೆ ಕೇಳಿದಾಗ ಅಗತ್ಯವಿರುವಷ್ಟು ಮಾತ್ರ ಹೇಳಿದ್ದರು. ಅವರ ಅಳಿಯನಾಗಿರುವ ಡಾ ಮಂಜುನಾಥ್ ಸಹ ಅನಾವಶ್ಯಕ ಮಾತುಗಳನ್ನು ಹೇಳಲಿಲ್ಲ. ಅವರು ಹೇಳಿದಂತೆ, ಉಗ್ರರನ್ನು ಮಟ್ಟ ಹಾಕುವುದು ಮತ್ತು ಪಾಕಿಸ್ತಾನಕ್ಕೆ ಪಾಠ ಕಲಿಸುವುದು ಸಮಯದ ಕರೆಯಾಗಿದೆ.

ರಾಮನಗರ, ಏಪ್ರಿಲ್ 29: ಪಹಲ್ಗಾಮ್ ಉಗ್ರರ ದಾಳಿ ಮತ್ತು 26ಅಮಾಯಕ ಪ್ರವಾಸಿಗರ ಮಾರಣಹೋಮಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಅವರು ನೇರವಾದ ಉತ್ತರ ನೀಡಿದರು. ಭದ್ರತೆ ಲೋಪವೋ (security lapse) ಅಥವಾ ಮತ್ತೊಂದೋ ಅಂತ ಯೋಚನೆ ಮಾಡುತ್ತಾ ಕೂರಲು ಇದು ಸಮಯವಲ್ಲ, ನಾವು ಕೂಡಲೇ ಕಾರ್ಯಪ್ರವೃತ್ತರಾಗಿ ಅಮಾಯಕರನ್ನು ದಾರುಣವಾಗಿ ಕೊಂದ ಭಯೋತ್ಪಾದಕರನ್ನು ಸದೆಬಡಿಯಬೇಕಿದೆ, ಭಾರತದ ಆ್ಯಕ್ಷನ್ ಈಗ ಮುಖ್ಯವಾದ ಸಂಗತಿಯೆನಿಸಿಕೊಳ್ಳುತ್ತದೆ, ಮಿಕ್ಕ ವಿಚಾರಗಳನ್ನೆಲ್ಲ ಅಮೇಲೆ ಮಾತಾಡಬಹುದು ಎಂದು ಡಾ ಮಂಜುನಾಥ್ ಹೇಳಿದರು.

ಇದನ್ನೂ ಓದಿ: ಪಹಲ್ಗಾಮ್​ ದಾಳಿ: ಉಗ್ರರಲ್ಲಿ ಒಬ್ಬ ಪಾಕಿಸ್ತಾನ ಸೇನೆಯ ಮಾಜಿ ಕಮಾಂಡೋ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ