Dinesh Gundu Rao: ಆರೋಗ್ಯ ಸಚಿವರೇ, ಎಲ್ಲ ಕೆಲಸ ಬದಿಗಿಟ್ಟು ಚಾಮರಾಜನಗರಕ್ಕೆ ಹೋಗಿ, ಜಿಲ್ಲಾಸ್ಪತ್ರೆ ಅಧೋಗತಿ ತಲುಪಿದೆ!
ಅರೋಗ್ಯ ಸಚಿವರೇ, ರಾಜ್ಯದ ಜನತೆ ಬದಲಾವಣೆ ಬಯಸಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ, ದೂರುವ ಅವಕಾಶ ಅವರಿಗೆ ಕೊಡಬೇಡಿ.
ಚಾಮರಾಜನಗರ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರೇ, ಈ ವಿಡಿಯೋ ಎಕ್ಸ್ ಕ್ಲ್ಯೂಸಿವ್ಲೀ ನಿಮಗಾಗಿ. ವಿಡಿಯೋ ಕಾಣುತ್ತಿರುವ ಹಾಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯ (district hospital) ಇಂಥ ಹೀನ ಸ್ಥಿತಿಗೆ ಖಂಡಿತ ನೀವು ಕಾರಣರಲ್ಲ. ಆದರೆ ಇದನ್ನು ಕೂಡಲೇ ಸರಿಮಾಡುವ ಹೊಣೆಗಾರಿಕೆ (responsibility) ನಿಮ್ಮ ಮೇಲಿದೆ. ಇಲ್ಲಿನ ದುರವಸ್ಥೆಯನ್ನು ಕೊಂಚ ಗಮನಿಸಿ. ಕಡು ಬೇಸಿಗೆಯ ದಿನಗಳಲ್ಲಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವ ರೋಗಿಗಳು ಸೆಕೆಯ ಬಗ್ಗೆ ದೂರಬಾರದು, ಆರಾಮವಾಗಿ ನಿದ್ರಿಸಬೇಕು ಅಂತಾದರೆ ಅದಕ್ಕೆ ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು. ಅಂದರೆ ಮನೆಯಿಂದ ತಾವೇ ಫ್ಯಾನ್ ತಂದುಕೊಳ್ಳಬೇಕು! ಎಲ್ಲೂ ಕಂಡು ಕೇಳಿರಿಯದ ಸ್ಥಿತಿ ಇದು. ಅರೋಗ್ಯ ಸಚಿವರೇ, ರಾಜ್ಯದ ಜನತೆ ಬದಲಾವಣೆ ಬಯಸಿ ನಿಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ, ದೂರುವ ಅವಕಾಶ ಅವರಿಗೆ ಕೊಡಬೇಡಿ.
ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Latest Videos