ದುಬಾರೆ ಶಿಬಿರದಿಂದ ನಾಡಿಗೆ ಬಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ರಂಜಿಸಿದ ಆನೆಗಳಿಗೆ ವಿದಾಯ ಹೇಳುವ ಸಮಯ
ಜಂಬೂ ಸವಾರಿಗಾಗಿ ಅಭಿಮನ್ಯು ಮತ್ತು ಅವನ ತಂಡದ ಸದಸ್ಯರಿಗೆ ಮಾಡಿದ ಅಲಂಕಾರ ಹಾಗೆಯೇ ಇದೆ. ತೂಕ ಪರೀಕ್ಷಣೆಯ ಬಳಿಕ ಅಭಿಮನ್ಯು ಕೃತಜ್ಞತೆ ಸಲ್ಲಿಸುವ ಹಾಗೆ ಅಲ್ಲಿದ್ದವರಿಗೆ ತನ್ನ ಸೊಂಡಿಲೆತ್ತಿ ಪೊಡಮಡುತ್ತಾನೆ. ಇಲ್ಲಿಂದ ಆನೆಗಳನ್ನು ಅರಮನೆಗೆ ಕರೆದೊಯ್ದು ಪದ್ಧತಿಯ ಪ್ರಕಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ.
ಮೈಸೂರು: ಈ ವರ್ಷದ ದಸರಾ ಮಹೋತ್ಸವ (Dasara Mohotsav) ಕೊನೆಗೊಂಡಿದೆ. ನಾಡಹಬ್ಬಕ್ಕಾಗಿ ದುಬಾರೆ ಆನೆ ಶಿಬಿರದಿಂದ ಸುಮಾರು ಒಂದು ತಿಂಗಳ ಹಿಂದೆ ನಗರಕ್ಕೆ ರಾಜಾತಿಥ್ಯ ಅನುಭವಿಸಿದ ಕ್ಯಾಪ್ಟನ್ ಅಭಿಮನ್ಯು (Captain Abhimanyu) ನೇತೃತ್ವದ ಅನೆಗಳಿಗೆ ಈಗ ವಿದಾಯ ಹೇಳುವ ಸಮಯ. ಆನೆಗಳನ್ನು ಇಲ್ಲಿಗೆ ಯಾವ ಗೌರವಾದರಗಳಿಂದ ಕರೆತರಲಾಯಿತೋ ವಿದಾಯ ಹೇಳುವಾಗಲೂ ಅದೇ ಗೌರವವನ್ನು ಅವುಗಳಿಗೆ ಸಲ್ಲಿಸಲಾಗುತ್ತದೆ. ದೃಶ್ಯದಲ್ಲಿ ನೀವು ನೋಡುವ ಹಾಗೆ ಆನೆಗಳ ತೂಕವನ್ನು (weight) ಪರೀಕ್ಷಿಸಲಾಗುತ್ತಿದೆ. ಜಂಬೂ ಸವಾರಿಗಾಗಿ ಅಭಿಮನ್ಯು ಮತ್ತು ಅವನ ತಂಡದ ಸದಸ್ಯರಿಗೆ ಮಾಡಿದ ಅಲಂಕಾರ ಹಾಗೆಯೇ ಇದೆ. ತೂಕ ಪರೀಕ್ಷಣೆಯ ಬಳಿಕ ಅಭಿಮನ್ಯು ಕೃತಜ್ಞತೆ ಸಲ್ಲಿಸುವ ಹಾಗೆ ಅಲ್ಲಿದ್ದವರಿಗೆ ತನ್ನ ಸೊಂಡಿಲೆತ್ತಿ ಪೊಡಮಡುತ್ತಾನೆ. ಇಲ್ಲಿಂದ ಆನೆಗಳನ್ನು ಅರಮನೆಗೆ ಕರೆದೊಯ್ದು ಪದ್ಧತಿಯ ಪ್ರಕಾರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅರಮನೆಯ ಆಡಳಿತ ಮಂಡಳಿ ಪೂಜಾ ವಿಧಿವಿಧಾನಗಳನ್ನು ಪೂರೈಸುತ್ತವೆ. ಒಂದು ತಿಂಗಳು ಕಾಲ ನಮ್ಮೊಂದಿಗಿದ್ದು ರಂಜಿಸಿ, ಜಂಬೂ ಸವಾರಿಯಲ್ಲಿ ಪಾಲ್ಗೊಂಡ ಅಭಿಮನ್ಯು ಮತ್ತವನ ತಂಡಕ್ಕೆ ನಾಡಿನ ಎಲ್ಲ ಕನ್ನಡಿಗರಿಂದ ದೊಡ್ಡ ಸಲಾಂ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ