ಬಳ್ಳಾರಿ ಅಧಿವೇಶನ: ತಂದೆ ವಯಸ್ಸಿನ ಜನಾರ್ಧನ ರೆಡ್ಡಿಯನ್ನು ಸಹಪಾಠಿಯಂತೆ ಬೈದಾಡಿದ ಭರತ್ ರೆಡ್ಡಿಗೆ ಸದನದ ವರ್ತನೆ ಹೇಳಿಕೊಡಬೇಕಿದೆ!
Karnataka Assembly Session: ಅದಕ್ಕೂ ಮಿಗಿಲಾಗಿ ಭರತ್ ಗೆ ನಾಲಗೆ ಮೇಲೆ ಹಿಡಿತವಿಲ್ಲ. ಜನಾರ್ಧನ ರೆಡ್ಡಿ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿದ್ದವರು ಮತ್ತು 60ರ ಗಡಿ ಸಮೀಸುತ್ತಿರುವ ಹಿರಿಯರು. ಅವರ ವಯಸ್ಸಿಗಾದರೂ ಮರ್ಯಾದೆ ಬೇಡವೇ? ಭರತ್ ಬೈಗುಳ ಭಾಷೆಯಲ್ಲಿ ಮಾತಾಡುತ್ತಿದ್ದರೂ ಜನಾರ್ಧನ ತಾಳ್ಮೆ ಕಳೆದುಕೊಳ್ಳದೆ ಮಾತಾಡುತ್ತಾರೆ. ಉತ್ತಮ ಸಂಸದೀಯ ಪಟುವಿನ ಲಕ್ಷಣ ಅದು!
ಬೆಳಗಾವಿ: ಒಂದು ಗ್ರಾಮ ಪಂಚಾಯಿತಿ ಸದಸ್ಯನಾಗಲು ಅರ್ಹತೆ ಇರದ ವ್ಯಕ್ತಿಯನ್ನು ಶಾಸಕನಾಗಿ ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದರೆ ಏನಾಗುತ್ತದೆ ಅನ್ನೋದು ಬಳ್ಳಾರಿಯ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯನ್ನು (Bharath Reddy) ನೋಡಿದರೆ ಅರಿವಾಗುತ್ತದೆ. ಅವರು ಸದನದಲ್ಲಿ ವಿಷಯಗಳನ್ನು, ತನ್ನ ಕ್ಷೇತ್ರದ ಸಮಸ್ಯೆಗಳನ್ನು ಚರ್ಚಿಸಲು ಎಲ್ಲ ಹಕ್ಕಿದೆ. ಆದರೆ ತನ್ನ ತಂದೆ ವಯಸ್ಸಿನ ಒಬ್ಬ ಹಿರಿಯ ಶಾಸಕನನ್ನು ಸದನದಲ್ಲಿ ಹೋಗಲೋ ಬಾರಲೋ, ಸುಮ್ನೆ ಕೂತ್ಕೊಳ್ಳಲೋ ಅಂತ ದಾಳಿ ಮಾಡುವುದನ್ನು ಪ್ರಾಯಶಃ ವಿಧಾನ ಸಭೆ ಅಧಿವೇಶನದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದಿರಬಹುದು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (KRPP) ಶಾಸಕ ಗಾಲಿ ಜನಾರ್ಧನ ರೆಡ್ಡಿ (Gali Janardhan Reddy) ಅವರ ವೈಯಕ್ತಿಕ ವಿಚಾರಗಳು ಏನಾದರೂ ಆಗಿರಲಿ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಬಳ್ಳಾರಿಯಿಂದ ಗಡೀಪಾರಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ.
ಆದರೆ, ಇದೇ ಮೊದಲ ಬಾರಿಗೆ ಶಾಸಕರಾಗಿರುವ ಭರತ್ ರೆಡ್ಡಿ ಅದನ್ನೆಲ್ಲ ಸದನದಲ್ಲಿ ಪ್ರಸ್ತಾಪಿರುವ ಅವಶ್ಯಕತೆಯಿರಲಿಲ್ಲ. ಅದಕ್ಕೂ ಮಿಗಿಲಾಗಿ ಭರತ್ ಗೆ ನಾಲಗೆ ಮೇಲೆ ಹಿಡಿತವಿಲ್ಲ. ಜನಾರ್ಧನ ರೆಡ್ಡಿ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗಿದ್ದವರು ಮತ್ತು 60ರ ಗಡಿ ಸಮೀಸುತ್ತಿರುವ ಹಿರಿಯರು. ಅವರ ವಯಸ್ಸಿಗಾದರೂ ಮರ್ಯಾದೆ ಬೇಡವೇ? ಭರತ್ ಬೈಗುಳ ಭಾಷೆಯಲ್ಲಿ ಮಾತಾಡುತ್ತಿದ್ದರೂ ಜನಾರ್ಧನ ತಾಳ್ಮೆ ಕಳೆದುಕೊಳ್ಳದೆ ಮಾತಾಡುತ್ತಾರೆ. ಉತ್ತಮ ಸಂಸದೀಯ ಪಟುವಿನ ಲಕ್ಷಣ ಅದು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ