ಕೋರ್ಟ್ ತೀರ್ಪು ನೀಡುವ ಮೋದಲು ಚರ್ಚೆಗಳನ್ನು ಮಾಡೋದು ಸರಿಯಲ್ಲ: ಜಿ ಪರಮೇಶ್ವರ್, ಗೃಹ ಸಚಿವ
ಒಂದು ಪಕ್ಷ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರೆ ತನಿಖಾ ಸಂಸ್ಥೆಯು ತನ್ನ ಕಾರ್ಯವನ್ನು ಆರಂಭಿಸುವ ಮೊದಲು ರಾಜ್ಯ ಸರ್ಕಾರದಿಂದ ಅನುಮತಿಯನ್ನು ಪಡೆಯಬೇಕಾ ಎಂದು ಕೇಳಿದ ಪ್ರಶ್ನೆಗೆ ಪರಮೇಶ್ವರ್, ಕಾನೂನಲ್ಲಿ ಹಾಗಿದೆ, ಆ ಕಾನೂನನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದಲ್ಲ ಎಂದು ಹೇಳಿದರು.
ಬೆಂಗಳೂರು: ಇವತ್ತು ಹೈಕೋರ್ಟ್ ನಲ್ಲಿ ಒಬ್ಬ ಮಾಜಿ ಮತ್ತೊಬ್ಬ ಹಾಲಿ ಮುಖ್ಯಮಂತ್ರಿಯವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು ಇಬ್ಬರಿಗೂ ರಿಲೀಫ್ ಸಿಕ್ಕಿದೆ, ಅದು ಬೇರೆ ವಿಚಾರ. ಕೋರ್ಟ್ ತೀರ್ಪು ಹೊರಬೀಳುವ ಮೊದಲು ನಗರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, ಇದು ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಊಹಾಪೋಹಗಳನ್ನು ಆಧರಿಸಿ ಹೇಳಿಕೆ ನೀಡಲಾಗಲ್ಲ, ಕೋರ್ಟ್ ತೀರ್ಪು ನೀಡಿದ ಬಳಿಕವೇ ಅದರ ಮೇಲೆ ಚರ್ಚೆ ಮಾಡಬಹುದು ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗುಬ್ಬಿ ಶ್ರೀನಿವಾಸ್ ಜೊತೆ ವೈರತ್ವವೇನೂ ಇಲ್ಲ, ಅವರೊಂದಿಗೆ ಮಾತಾಡುತ್ತೇನೆ: ಜಿ ಪರಮೇಶ್ವರ್