ಹಲಸಿನ ಹಣ್ಣಿನ ಇಡ್ಲಿ: ಕೊಡವರ ಸಾಂಪ್ರದಾಯಿಕ ತಿಂಡಿಯನ್ನು ಮಾಡಿ ಸವಿಯಿರಿ
ಹಲಸಿನ ಹಣ್ಣಿನ ಇಡ್ಲಿ

ಹಲಸಿನ ಹಣ್ಣಿನ ಇಡ್ಲಿ: ಕೊಡವರ ಸಾಂಪ್ರದಾಯಿಕ ತಿಂಡಿಯನ್ನು ಮಾಡಿ ಸವಿಯಿರಿ

| Updated By: preethi shettigar

Updated on: Jun 12, 2021 | 7:28 AM

ಈಗ ಹಲಸಿನ ಹಣ್ಣು ಹೆಚ್ಚಾಗಿ ಸಿಗುವ ಸಮಯ. ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಅಂತೆಯೇ ಇಂದು ಕೊಡವರ ಶೈಲಿಯ ಹಲಸಿನ ಹಣ್ಣಿನ ಇಡ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಈಗ ಹಲಸಿನ ಹಣ್ಣು ಹೆಚ್ಚಾಗಿ ಸಿಗುವ ಸಮಯ. ಈ ಹಣ್ಣಿನಿಂದ ಯಾವೇಲ್ಲ ಅಡುಗೆಯನ್ನು ಮಾಡಬಹುದು ಎಂದರೆ ಒಬ್ಬೊಬ್ಬರದ್ದು, ಒಂದೊಂದು ರೆಸಿಪಿ ಇರುತ್ತದೆ. ಅಂತೆಯೇ ಇಂದು ಕೊಡವರ ಶೈಲಿಯ ಹಲಸಿನ ಹಣ್ಣಿನ ಇಡ್ಲಿ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಹಲಸಿನ ಹಣ್ಣಿನ ಇಡ್ಲಿ ಮಾಡಲು ಬೇಕಾದ ಸಾಮಾಗ್ರಿಗಳು ಏಲಕ್ಕಿ, ಅಕ್ಕಿ ರವೆ, ಹಲಸಿನ ಹಣ್ಣು, ಉಪ್ಪು, ಕೊಬ್ಬರಿ ತುರಿ, ಬಾಳೆ ಎಲೆ ಮತ್ತು ತುಪ್ಪ

ಹಲಸಿನ ಹಣ್ಣಿನ ಇಡ್ಲಿ ಮಾಡುವ ವಿಧಾನ
ಹಲಸಿನ ಹಣ್ಣನ್ನು ಚೆನ್ನಾಗಿ ಕಿವುಚಿ ರಸ ತೆಗೆದುಕೊಳ್ಳಬೇಕು. ನಂತರ ಅದಕ್ಕೆ ಸಕ್ಕರೆ ಹಾಕಿ ಕಲಸಿಕೊಳ್ಳಬೇಕು. ಬಳಿಕ ಅದಕ್ಕೆ ಉಪ್ಪು, ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಅಕ್ಕಿರವೆ ಹಾಕಿ ಕಲಸಬೇಕು. ಒಂದು ಗಂಟೆ ಅದನ್ನು ಹಾಗೆ ಇಡಬೇಕು. ನಂತರ ಇಡ್ಲಿ ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದರ ಮೇಲೆ ಒಂದು ತಟ್ಟೆ ಇಟ್ಟು, ಬಾಳೆ ಎಲೆಗೆ ತುಪ್ಪವನ್ನು ಸವರಿ ಸಿದ್ಧಪಡಿಸಿಕೊಂಡ ಹಲಸಿನಕಾಯಿ ಹಿಟ್ಟನ್ನು ಅದರೊಳಗೆ ಹಾಕಿ ಮಡಚಿ ಇಡ್ಲಿ ಪಾತ್ರೆಯಲ್ಲಿ ಹಾಕಿ. ಬಳಿಕ ಮುಚ್ಚಳವನ್ನು ಮುಚ್ಚಿ. 25 ನಿಮಿಷ ಬೇಯಿಸಬೇಕು. ನಂತರ ರುಚಿಕರವಾದ ಹಲಸಿನ ಹಣ್ಣಿನ ಇಡ್ಲಿ ಸವಿಯಲು ಸಿದ್ಧ

ಇದನ್ನೂ ಓದಿ:

ಹೀರೇಕಾಯಿ ದೋಸೆ; ತರಕಾರಿ ಇಷ್ಟಪಡದವರಿಗಾಗಿ ಈ ವಿಧಾನವನ್ನು ಒಮ್ಮೆ ಅನುಸರಿಸಿ

ನೇರಳೆ ಹಣ್ಣಿನ ಜ್ಯೂಸ್; ಆರೋಗ್ಯಯುತವಾದ ಈ ವಿಧಾನವನ್ನೊಮ್ಮೆ ಅನುಸರಿಸಿ ನೋಡಿ