ಧಾರವಾಡ, ಹಾವೇರಿ ಕ್ಷೇತ್ರಗಳ ಬಿಜೆಪಿ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಗೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಯಿತೇ?

ಅವರ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೆ ನಂಬಿಕೆ-ವಿಶ್ವಾಸ ಇರಬಹುದು, ಅದರೆ ಅದೇ ಭಾವನೆ ರಾಷ್ಟ್ರೀಯ ನಾಯಕರಲ್ಲಿ ಇದ್ದೀತೇ? ಹಲವಾರು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಜನರ ಮತ್ತು ಕಾರ್ಯಕರ್ತರ ವಿರೋಧ ವ್ಯಕ್ತವಾಗುತ್ತಿದೆ ಮತ್ತು ‘ಗೋ ಬ್ಯಾಕ್ ಸಂಸದ’ ಅಭಿಯಾನಗಳು ನಡೆಯುತ್ತಿವೆ. ವರಿಷ್ಠರು ವಿನ್ನೇಬಲ್ ಅಭ್ಯರ್ಥಿಗಳ ತಲಾಶ್ ನಲ್ಲಿದ್ದಾರೆ.

ಧಾರವಾಡ, ಹಾವೇರಿ ಕ್ಷೇತ್ರಗಳ ಬಿಜೆಪಿ ಟಿಕೆಟ್ ವಂಚಿತ ಜಗದೀಶ್ ಶೆಟ್ಟರ್ ಗೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಎದುರಾಯಿತೇ?
|

Updated on: Mar 14, 2024 | 1:36 PM

ಹುಬ್ಬಳ್ಳಿ: ಮೊನ್ನೆಯಷ್ಟೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ವಾಪಸ್ಸು ಹೋಗಿದ್ದ ಜಗದೀಶ್ ಶೆಟ್ಟರ್ (Jagadish Shettar) ಬಹಳ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha polls) ಧಾರವಡ ಇಲ್ಲವೇ ಹಾವೇರಿ ಕ್ಷೇತ್ರದ ಟಿಕೆಟ್ ಸಿಗುವ ಭರವಸೆ ಸಿಕ್ಕ ಬಳಿಕ ಬಿಜೆಪಿಗೆ ಹಿಂತಿರುಗಿದ್ದ ಶೆಟ್ಟರ್ ಭ್ರಮನಿರಸನಗೊಂಡಿದ್ದಾರೆ. ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅವರು ಬೆಳಗಾವಿ ಕ್ಷೇತ್ರದ (Belagavi constituency) ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಇಷ್ಟಕ್ಕೂ ಅವರಿಗೆ ಟಿಕೆಟ್ ಸಿಕ್ಕೀತೇ? ಬಹಳ ಕಷ್ಟ ಅನಿಸುತ್ತೆ. ಅವರ ಬಗ್ಗೆ ರಾಜ್ಯದ ಬಿಜೆಪಿ ನಾಯಕರಿಗೆ ನಂಬಿಕೆ-ವಿಶ್ವಾಸ ಇರಬಹುದು, ಅದರೆ ಅದೇ ಭಾವನೆ ರಾಷ್ಟ್ರೀಯ ನಾಯಕರಲ್ಲಿ ಇದ್ದೀತೇ? ಹಲವಾರು ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಜನರ ಮತ್ತು ಕಾರ್ಯಕರ್ತರ ವಿರೋಧ ವ್ಯಕ್ತವಾಗುತ್ತಿದೆ ಮತ್ತು ‘ಗೋ ಬ್ಯಾಕ್ ಸಂಸದ’ ಅಭಿಯಾನಗಳು ನಡೆಯುತ್ತಿವೆ. ವರಿಷ್ಠರು ವಿನ್ನೇಬಲ್ ಅಭ್ಯರ್ಥಿಗಳ ತಲಾಶ್ ನಲ್ಲಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ಶೆಟ್ಟರ್ ಅವರು ಯಡಿಯೂರಪ್ಪ ಅಥವಾ ಸಿದ್ದರಾಮಯ್ಯರಂತೆ ಮಾಸ್ ಲೀಡರ್ ಅಲ್ಲ. ತಮ್ಮ ಕ್ಷೇತ್ರದಲ್ಲೇ ವಿಧಾನ ಸಭಾ ಚುನಾವಣೆ ಗೆಲ್ಲಲಾಗದವರು ಬೆಳಗಾವಿಯಲ್ಲಿ ಲೋಕಸಭಾ ಚುನಾವಣೆ ಗೆಲ್ಲುತ್ತಾರೆಯೇ ಎಂಬ ಅಂಶ ಟಿಕೆಟ್ ಹಂಚುವಾಗ ಗಣನೆಗೆ ಬರುತ್ತದೆ. ಸಾಯಂಕಾಲದವರೆಗೆ ಕಾದು ನಿರ್ಧಾರ ಪ್ರಕಟಿಸುವುದಾಗಿ ಶೆಟ್ಟರ್ ಹೇಳುತ್ತಾರೆ. ಅವರ ಮುಂದಿರುವ ಅಯ್ಕೆಯಾದರೂ ಯಾವುದು? ಪುನಃ ಕಾಂಗ್ರೆಸ್ ಗೆ ? ನೋ ವೇ ಮಾರಾಯ್ರೇ. ಕಾಂಗ್ರೆಸ್ ನಾಯಕರು ಈ ಬಾರಿ ಅವರನ್ನು ನಂಬಲಾರರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

Follow us