ಬಿಜೆಪಿಯನ್ನು ಲೀಡರ್ಲೆಸ್ ಪಾರ್ಟಿ ಅನ್ನುವ ಜಗದೀಶ್ ಶೆಟ್ಟರ್ ತಮ್ಮ ಪೂರ್ವಾಶ್ರಮ ಮರೆಯಬಾರದು: ಗೋವಿಂದ ಕಾರಜೋಳ, ಬಿಜೆಪಿ ನಾಯಕ
ಪಕ್ಷದ ರಾಷ್ಟ್ರೀಯ ನಾಯಕರು ಮುಂದಿನ ಕೆಲ ದಿನಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದರು.
ಬೆಂಗಳೂರು: ದೆಹಲಿಗೆ ಕೇವಲ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಬಿಜೆಪಿ ನಾಯಕರೂ ಹೋಗುತ್ತಿದ್ದಾರೆ. ನಿನ್ನೆ ಮಾಜಿ ಶಾಸಕ ಸಿಟಿ ರವಿ (CT Ravi) ದೆಹಲಿಗೆ ಹಾರಿದ ಸಂಗತಿಯನ್ನು ವರದಿ ಮಾಡಲಾಗಿದೆ. ಇಂದು ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಗೋವಿಂದ ಕಾರಜೋಳ (Govind Karjol) ಸಹ ದೆಹಲಿಗೆ ತೆರಳಿದರು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕಾರಜೋಳ ಸಿಟಿ ರವಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ (national general secretary) ಕಾರಣ ಆಗಾಗ ದೆಹಲಿಗೆ ಹೋಗುತ್ತಿದ್ದರು ಮತ್ತು ಈಗ ಅಧಿಕಾರ ವಾಪಸ್ಸು ನೀಡಲು ಹೋಗಿದ್ದಾರೆ. ಪಕ್ಷದ ವರಿಷ್ಠ ನಾಯಕರು ಮುಂದಿನ ಕೆಲ ದಿನಗಳಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದರು. ಜಗದೀಶ್ ಶೆಟ್ಟರ್, ಬಿಜೆಪಿಯನ್ನು ಲೀಡರ್ ಲೆಸ್ ಪಾರ್ಟಿ ಅಂತ ಕರೆದಿರುವುದಕ್ಕೆ ಉತ್ತರಿಸಿದ ಕಾರಜೋಳ, ತಾನು ಶೆಟ್ಟರ್ ಜೊತೆ ಕೆಲಸ ಮಾಡಿದ್ದು ಅವರ ಬಗ್ಗೆ ಕಾಮೆಂಟ್ ಮಾಡೋದಿಲ್ಲ, ಆದರೆ ಅವರು ತಮ್ಮ ಪೂರ್ವಾಶ್ರಮ ಮರೆಯಬಾರದು ಎಂದಷ್ಟೇ ಹೇಳುತ್ತೇನೆ ಅಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ