ಬಹು ನಿರೀಕ್ಷಿತ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಲ್ಲಿಸಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ
ಲಭ್ಯವಿರುವ ಮಾಹಿತಿ ಪ್ರಕಾರ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣೀಕ ಸಮೀಕ್ಷೆ ಹಾಗೂ ಜಾತಿವಾರು ಜನಸಂಖ್ಯೆ ಅಡಕವಾಗಿದೆ. ವರದಿಯನ್ನು ಸ್ವೀಕರಿಸಿದ ಬಳಿಕ ಮಾತಾಡಿದ ಸಿದ್ದರಾಮಯ್ಯ, ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗಿದೆ, ವರದಿಯಲ್ಲಿ ಏನೇನಿದೆ ಅಂತ ಮಾಹಿತಿ ಇಲ್ಲ, ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಬೆಂಗಳೂರು: ಸರಕಾರ ನೀಡಿದ್ದ ಗಡುವಿನ ಪ್ರಕಾರ ನಾಡಿನ ಜನ ಮಾತ್ರವಲ್ಲದೆ ಭಾರತದ ನಾನಾ ಭಾಗಗಳಲ್ಲಿ ಕರ್ನಾಟಕದ ಜಾತಿ ಗಣತಿ ವರದಿ (Caste Census Report) ಇಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ. ವರದಿಯನ್ನ ತಯಾರಿಸಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ (Jayaprakash Hegde) ನೇತೃತ್ವದ ತಂಡ ಇಂದು ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಸಲ್ಲಿಸಿತು. ಲಭ್ಯವಿರುವ ಮಾಹಿತಿ ಪ್ರಕಾರ ಒಂದು ಸಾವಿರಕ್ಕೂ ಹೆಚ್ಚು ಪುಟಗಳ ವರದಿಯಲ್ಲಿ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣೀಕ ಸಮೀಕ್ಷೆ ಹಾಗೂ ಜಾತಿವಾರು ಜನಸಂಖ್ಯೆ ಅಡಕವಾಗಿದೆ. ವರದಿಯನ್ನು ಸ್ವೀಕರಿಸಿದ ಬಳಿಕ ಮಾತಾಡಿದ ಸಿದ್ದರಾಮಯ್ಯ, ಜಾತಿಗಣತಿ ವರದಿಯನ್ನು ಸ್ವೀಕರಿಸಲಾಗಿದೆ, ವರದಿಯಲ್ಲಿ ಏನೇನಿದೆ ಅಂತ ಮಾಹಿತಿ ಇಲ್ಲ, ಸಂಪುಟ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ನಂತರ ಮಾತಾಡಿದ ಜಯಪ್ರಕಾಶ್ ಹೆಗಡೆ ವರದಿಗೆ ಕಾರ್ಯದರ್ಶಿ ಮತ್ತು ಎಲ್ಲ ಸದಸ್ಯರು ಸಹಿ ಹಾಕಿದ್ದಾರೆ ಎಂದು ಹೇಳಿದರು. ವರದಿಯನ್ನು ಓದದೆ ಕೆಲವರು ಅವೈಜ್ಞಾನಿಕ ಎಂದು ಹೇಳುತ್ತಿದ್ದಾರೆ, ಅದು ಸರಿಯಲ್ಲ, ತಾವು ತಯಾರು ಮಾಡಿರುವ ಜಾತಿ ಗಣತಿ ಎಲ್ಲೂ ಸೋರಿಕೆಯಾಗಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಾತಿಗಣತಿ ವರದಿ ಸಲ್ಲಿಕೆ; ಜನಸಂಖ್ಯೆ ಆಧಾರದ ಮೇಲೆ ಹಕ್ಕು ಹಂಚಲು ಕಾಂಗ್ರೆಸ್ ನಾಯಕರ ತಕರಾರಿಲ್ಲ: ಪ್ರಿಯಾಂಕ್ ಖರ್ಗೆ