ಸದನದಲ್ಲಿ ಕಾಂಗ್ರೆಸ್ ಸದಸ್ಯರು ಮಾಡುತ್ತಿದ್ದ ಗಲಾಟೆ ಹೆಚ್ ಡಿ ರೇವಣ್ಣನವರಿಗೆ ಮಾತಾಡುವ ಅವಕಾಶ ನೀಡಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 18, 2022 | 6:40 PM

ರೇವಣ್ಣ ಅವರ ಅಸಹನೆ ಹೆಚ್ಚುತ್ತಲೇ ಹೋಗುತ್ತದೆ, ಅವರು ಕಾಂಗ್ರೆಸ್ ಸದಸ್ಯರೆಡೆ ನೋಡಿ, ‘ಏಯ್ ಸ್ವಲ್ಪ ಸುಮ್ನಿರಿ, ಹೇಳೋದನ್ನು ಕೇಳಿಸ್ಕೊಳ್ರೀ,’ ಅಂತ ಜೋರಾಗಿ ಹೇಳುತ್ತಾರೆ. ಸಭಾಧ್ಯಕ್ಷರ ಮಾತು ಕೇಳದ ಕಾಂಗ್ರೆಸ್ ಪಕ್ಷದವರು ರೇವಣ್ಣನವರು ಮಾತಿಗೆ ಸುಮ್ಮನಾಗುತ್ತಾರೆಯೇ?

ಮಾಜಿ ಸಚಿವ ಮತ್ತು ಜೆಡಿ(ಎಸ್) ಪಕ್ಷದ ಹಿರಿಯ ನಾಯಕ ಹೆಚ್ ಡಿ ರೇವಣ್ಣ (HD Revanna) ಅವರು ವಿಧಾನ ಮಂಡಲದ ಅಧಿವೇಶನ (Assembly session) ನಡೆಯುವಾಗ ಮಾತನಾಡುವ ಸಂದರ್ಭಗಳ ಬಹಳ ಕಮ್ಮಿ. ಆದರೆ ಶುಕ್ರವಾರದಂದು ಅವರು ಮಾತಾಡಲು ಎದ್ದು ನಿಂತ ಗಳಿಗೆಯೇ ಸರಿ ಇರಲಿಲ್ಲ ಅನಿಸುತ್ತೆ. ಮಾಜಿ ಸ್ಪೀಕರ್ ಮತ್ತು ಕಾಂಗ್ರೆಸ್ ಪಕ್ಷದ ಶಾಸಕ ರಮೇಶ್ ಕುಮಾರ್ (Ramesh Kumar) ಅವರು ರೇವಣ್ಣನವರಿಗಿಂತ ಮೊದಲು ಮಾತಾಡಿ ಏನನ್ನೋ ಹೇಳಿದ್ದಾರೆ. ಪ್ರಾಯಶಃ ಅದರ ಮುಂದುವರೆದ ಭಾಗವಾಗಿ ಮಾತಾಡಲು ರೇವಣ್ಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರ ಅನುಮತಿ ಕೇಳಿದ್ದಾರೆ ಮತ್ತು ಅದನ್ನಯ ನೀಡಿದ್ದಾರೆ. ಕೆ ಎಸ್ ಈಶ್ವರಪ್ಪನವರ ವಿರುದ್ಧ ಕಾಂಗ್ರೆಸ್ ಧರಣಿ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅದರೆ ರೇವಣ್ಣ ಮಾತಾಡಲು ಎದ್ದು ನಿಂತಾಗ ಕಾಂಗ್ರೆಸ್ ಸದಸ್ಯರ ಅಬ್ಬರ ತಾರಕಕ್ಕೇರಿತ್ತು. ಅವರು ಮಾತಾಡಿದ್ದು ಸ್ಪೀಕರ್ ಅವರಿಗೆ ಕೇಳಿಸುತ್ತಿರಲಿಲ್ಲ.

ಇದರಿಂದ ಕುಪಿತಗೊಳ್ಳುವ ರೇವಣ್ಣ, ‘ಮಾನ್ಯ ಸಭಾದ್ಯಕ್ಷರೇ ಅವರಿಗೆ (ಕಾಂಗ್ರೆಸ್ ಸದಸ್ಯರು) ಗಲಾಟೆ ನಿಲ್ಲಿಸುವಂತೆ ಹೇಳಿ ನನ್ನ ಮಾತು ಕೇಳಿಸಿಕೊಳ್ಳಬೇಕು,’ ಅಂತ ವಿನಂತಿಸಿಕೊಳ್ಳುತ್ತಾರೆ. ಸ್ಪೀಕರ್ ಕಾಗೇರಿ ಗಲಾಟೆ ಮಾಡುತ್ತಿದ್ದ ಸದಸ್ಯರಿಗೆ ಸುಮ್ಮನಾಗುವಂತೆ ಹೇಳುತ್ತಾರಾದರೂ, ಗಲಾಟೆ ಮಾತ್ರ ನಿಲ್ಲುವುದಿಲ್ಲ.

ರೇವಣ್ಣ ಅವರ ಅಸಹನೆ ಹೆಚ್ಚುತ್ತಲೇ ಹೋಗುತ್ತದೆ, ಅವರು ಕಾಂಗ್ರೆಸ್ ಸದಸ್ಯರೆಡೆ ನೋಡಿ, ‘ಏಯ್ ಸ್ವಲ್ಪ ಸುಮ್ನಿರಿ, ಹೇಳೋದನ್ನು ಕೇಳಿಸ್ಕೊಳ್ರೀ,’ ಅಂತ ಜೋರಾಗಿ ಹೇಳುತ್ತಾರೆ. ಸಭಾಧ್ಯಕ್ಷರ ಮಾತು ಕೇಳದ ಕಾಂಗ್ರೆಸ್ ಪಕ್ಷದವರು ರೇವಣ್ಣನವರು ಮಾತಿಗೆ ಸುಮ್ಮನಾಗುತ್ತಾರೆಯೇ?

ಗಲಾಟೆ ಮುಂದುವರೆಯುತ್ತದೆ ಅದರ ಜೊತೆಗೆ ರೇವಣ್ಣನವರ ವ್ಯರ್ಥ ಕೂಗಾಟ ಸಹ!

ಇದನ್ನೂ ಓದಿ:  ಸಚಿವ ಈಶ್ವರಪ್ಪ ವಜಾಗೆ ಕಾಂಗ್ರೆಸ್ ಬಿಗಿ ಪಟ್ಟು, ವಿಧಾನಸಭೆ ಕಲಾಪ ಸೋಮವಾರಕ್ಕೆ ಮುಂದೂಡಿದ ಸ್ಪೀಕರ್