ನಟ ಧನಂಜಯ ಅವರನ್ನು ಹಾಡಿ ಹೊಗಳಿದ ಚಕ್ರವರ್ತಿ ಚಂದ್ರಚೂಡ್​

ನಟ ಧನಂಜಯ ಅವರನ್ನು ಹಾಡಿ ಹೊಗಳಿದ ಚಕ್ರವರ್ತಿ ಚಂದ್ರಚೂಡ್​

TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 18, 2022 | 5:14 PM

ಚಕ್ರವರ್ತಿ ಚಂದ್ರಚೂಡ್ ಕೂಡ ಆಗಮಿಸಿದ್ದರು. ವೇದಿಕೆ ಏರಿದ ಅವರು ಧನಂಜಯ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನು ಆಡಿದರು. ಕೇವಲ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಧನಂಜಯ ಮಿಂಚುತ್ತಿದ್ದಾರೆ. ಈ ವಿಚಾರದ ಬಗ್ಗೆ ಚಕ್ರವರ್ತಿ ಅವರಿಗೆ ಹೆಮ್ಮೆ ಇದೆ.

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ರಲ್ಲಿ (Bigg Boss) ಪಾಲ್ಗೊಳ್ಳುವ ಮೂಲಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud)​  ಅವರು ಎಲ್ಲರ ಗಮನ ಸೆಳೆದಿದ್ದರು. ಅವರು ವಿವಾದದ ಮೂಲಕವೇ ಸುದ್ದಿ ಆಗಿದ್ದು ಹೆಚ್ಚು. ಅವರು ನಟ ಧನಂಜಯ (Dhananjay) ಅವರನ್ನು ಹಾಡಿ ಹೊಗಳಿದ್ದಾರೆ. ಧನಂಜಯ ನಿರ್ಮಾಣ ಮಾಡಿ, ನಟಿಸಿರುವ ‘ಬಡವ ರಾಸ್ಕಲ್​’ ಸಿನಿಮಾ ಚಿತ್ರಮಂದಿರ ಹಾಗೂ ಒಟಿಟಿ ಎರಡರಲ್ಲೂ ಗೆದ್ದಿದೆ. ಧನಂಜಯ ಅವರು ಮಧ್ಯಮ ವರ್ಗದ ಹುಡುಗನಾಗಿ ಮಿಂಚಿದ್ದಾರೆ. ಈ ಸಿನಿಮಾ ತಂಡ ಇತ್ತೀಚೆಗೆ ಗೆಲುವಿನ ಸಂಭ್ರಮ ಹಂಚಿಕೊಳ್ಳಲು ಸಕ್ಸಸ್​ ಮೀಟ್​ ನಡೆಸಿತ್ತು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಕೂಡ ಆಗಮಿಸಿದ್ದರು. ವೇದಿಕೆ ಏರಿದ ಅವರು ಧನಂಜಯ ಬಗ್ಗೆ ಒಂದಷ್ಟು ಒಳ್ಳೆಯ ಮಾತುಗಳನ್ನು ಆಡಿದರು. ಕೇವಲ ಕನ್ನಡ ಮಾತ್ರವಲ್ಲದೆ, ಪರಭಾಷೆಯಲ್ಲೂ ಧನಂಜಯ ಮಿಂಚುತ್ತಿದ್ದಾರೆ. ಈ ವಿಚಾರದ ಬಗ್ಗೆ ಚಕ್ರವರ್ತಿ ಅವರಿಗೆ ಹೆಮ್ಮೆ ಇದೆ. ಇದನ್ನು ವೇದಿಕೆ ಮೇಲೆ ಅವರು ವ್ಯಕ್ತಪಡಿಸಿದರು.

ಇದನ್ನೂ ಓದಿ:‘ಹೆಡ್ ​ಬುಷ್​’ ಚಿತ್ರದಲ್ಲಿ ವಸಿಷ್ಠ ಸಿಂಹ ಪಾತ್ರ ಏನು? ಗುಟ್ಟು ಬಿಟ್ಟುಕೊಟ್ಟ ಧನಂಜಯ 

‘ಅವರಿಂದ ಪಡೆದ ಹಣ ನಾನಿನ್ನೂ ವಾಪಸ್​ ಕೊಟ್ಟಿಲ್ಲ’; ​ಇನ್​ಸೈಡ್​ ಮಾಹಿತಿ ಬಹಿರಂಗ ಪಡಿಸಿದ ಧನಂಜಯ