Dhananjaya: ಧನಂಜಯ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಫೈನಲ್; ‘ಹೊಯ್ಸಳ’ ಆದ ಡಾಲಿ
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆದ ‘ರತ್ನನ್ ಪ್ರಪಂಚ’ ಮೆಚ್ಚುಗೆ ಪಡೆದುಕೊಂಡಿತ್ತು. ತಾಯಿ ಸೆಂಟಿಮೆಂಟ್ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಿತ್ತು. ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ.ಜಿ. ರಾಜ್ ನಿರ್ಮಾಣ ಮಾಡಿದ್ದರು.

ನಟ ಧನಂಜಯ (Dhananjay) ಅವರಿಗೆ ಸ್ಯಾಂಡಲ್ವುಡ್ನಲ್ಲಿ (Sandalwood) ಭಾರೀ ಬೇಡಿಕೆ ಇದೆ. ಇತ್ತೀಚೆಗೆ ತೆರೆಕಂಡ ‘ಬಡವ ರಾಸ್ಕಲ್’ (Badava Rascal) ಸಿನಿಮಾ ಗೆದ್ದು ಬೀಗಿದೆ. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡಿದ್ದು, ನಿರ್ಮಾಪಕನಾಗಿ ಧನಂಜಯ ಅವರು ಗೆದ್ದಿದ್ದಾರೆ. ಈಗ ಅವರ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಅಂತಿಮ ಆಗಿದೆ. ಈ ಚಿತ್ರಕ್ಕೆ ‘ಹೊಯ್ಸಳ’ (Hoysala) ಎಂದು ಹೆಸರಿಡಲಾಗಿದೆ. ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನು ಕೆ.ಆರ್.ಜಿ. ಸ್ಟುಡಿಯೋಸ್ (KRG Studios) ನಿರ್ಮಾಣ ಮಾಡಿತ್ತು. ಈಗ ‘ಹೊಯ್ಸಳ’ ಚಿತ್ರವನ್ನೂ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ.
ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆದ ‘ರತ್ನನ್ ಪ್ರಪಂಚ’ ಮೆಚ್ಚುಗೆ ಪಡೆದುಕೊಂಡಿತ್ತು. ತಾಯಿ ಸೆಂಟಿಮೆಂಟ್ ಕಥೆ ಸಿನಿಮಾದಲ್ಲಿ ಹೈಲೈಟ್ ಆಗಿತ್ತು. ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ.ಜಿ. ರಾಜ್ ನಿರ್ಮಾಣ ಮಾಡಿದ್ದರು. ‘ಹೊಯ್ಸಳ’ ಚಿತ್ರದ ನಿರ್ಮಾಣ ಜವಾಬ್ದಾರಿಯೂ ಇವರದ್ದೇ ಆಗಿರಲಿದೆ. ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರು ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ.
ಗಣೇಶ್ ನಟನೆಯ ‘ಗೀತಾ’ ಸಿನಿಮಾ ವಿಮರ್ಶೆಯಲ್ಲಿ ಗೆದ್ದಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಜಯ್ ಎನ್. ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಂಗೀತ ನಿರ್ದೇಶನ ಜವಾಬ್ದಾರಿಯನ್ನು ಎಸ್. ಎಸ್. ತಮನ್ ಅವರ ಹೊತ್ತಿದ್ದಾರೆ. ಚಿತ್ರಕ್ಕೆ ದೀಪು. ಎಸ್. ಕುಮಾರ್ ಸಂಕಲನ ಮಾಡಲ್ಲಿದ್ದಾರೆ. ವಿಶ್ವಾಸ್ ಕಶ್ಯಪ್ ಅವರು ಕಲಾ ನಿರ್ದೇಶಕರಾಗಿದ್ದಾರೆ. ‘ಟಗರು’ ಖ್ಯಾತಿಯ ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.
?? ????????? ?????!!? ನಟರಾಕ್ಷಸನ ’25ನೇ ಚಿತ್ರ’ #Hoysala ?
ರಾಜ್ಯೋತ್ಸವ 2022ಗೆ #Daali25@yogigraj @Dhananjayaka @KRG_Studios #VijayN @MusicThaman pic.twitter.com/fiFiU3HYwO
— Karthik Gowda (@Karthik1423) January 14, 2022
‘ಹೊಯ್ಸಳ’ ಚಿತ್ರಕ್ಕೆ ಧನಂಜಯ ನಾಯಕ. ಈ ಚಿತ್ರ ಧನಂಜಯ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈ ಚಿತ್ರದ ಬಹುತೇಕ ಶೂಟಿಂಗ್ ಬೆಳಗಾವಿ ಜಿಲ್ಲೆಯಲ್ಲಿ ನಡೆಯಲಿದೆ. ಪೊಲೀಸ್ ಕಥಾಹಂದರವನ್ನು ಇದು ಹೊಂದಿದೆ. ಏಪ್ರಿಲ್ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಚಿತ್ರದ ಕಲಾವಿದರ ಆಯ್ಕೆ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಘೋಷಣೆ ಆಗಲಿದೆ. ಕನ್ನಡ ರಾಜ್ಯೋತ್ಸವಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವನ್ನು ಚಿತ್ರತಂಡ ಇಟ್ಟುಕೊಂಡಿದೆ.
ಇದನ್ನೂ ಓದಿ: ‘ಬಡವ ರಾಸ್ಕಲ್’ ಕಲೆಕ್ಷನ್ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು
‘ನಾವು ಕಾಲಿಟ್ರೆ ಹೊಸ ಅಲೆ ಏಳತ್ತೆ’; ಸಿನಿಮಾ ಜರ್ನಿಯನ್ನು ಇನ್ನೊಂದು ರೀತಿ ಅರ್ಥೈಸಿದ ಧನಂಜಯ
Published On - 4:03 pm, Fri, 14 January 22