HDKಗೆ ಅಗೌರವ: ಕ್ಷಮೆಗೆ ಒತ್ತಾಯಿಸಿದ ಜೆಡಿಎಸ್ ನಾಯಕರಿಗೆ ಪ್ರಸಾದ ತಿನ್ನಿಸಿ ಸಮಧಾನಪಡಿಸಿದ ಡಿಸಿ
ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ರೇವಣ್ಣ ಅವರಿಗೆ ಜಿಲ್ಲಾಡಳಿತದಿಂದ ಅವಮಾನವಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವಾಲಯದ ಮುಖ್ಯದ್ವಾರದ ಬಳಿ ಜಮಾಯಿಸಿದ ಕಾರ್ಯಕರ್ತರು, ಬ್ಯಾರಿಕೇಡ್ ತಳ್ಳಿಕೊಂಡು ಒಳನುಗ್ಗಲು ಯತ್ನಿಸಿದರು. ಇದರಿಂದಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಶಿಷ್ಟಾಚಾರ ಉಲ್ಲಂಘನೆ ಖಂಡಿಸಿ ರಸ್ತೆ ತಡೆ ನಡೆಸಿದ್ದು, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಆದ್ರೆ, ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ ಜೆಡಿಎಸ್ ನಾಯಕರಿಗೆ ಸಮಜಾಯಿಷಿ ನೀಡಿದರು.
ಬೆಂಗಳೂರು, (ಅಕ್ಟೋಬರ್ 19): ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕ ರೇವಣ್ಣ ಅವರಿಗೆ ಜಿಲ್ಲಾಡಳಿತದಿಂದ ಅವಮಾನವಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ದೇವಾಲಯದ ಮುಖ್ಯದ್ವಾರದ ಬಳಿ ಜಮಾಯಿಸಿದ ಕಾರ್ಯಕರ್ತರು, ಬ್ಯಾರಿಕೇಡ್ ತಳ್ಳಿಕೊಂಡು ಒಳನುಗ್ಗಲು ಯತ್ನಿಸಿದರು. ಇದರಿಂದಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಶಿಷ್ಟಾಚಾರ ಉಲ್ಲಂಘನೆ ಖಂಡಿಸಿ ರಸ್ತೆ ತಡೆ ನಡೆಸಿದ್ದು, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಆದ್ರೆ, ಸ್ಥಳಕ್ಕೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಭೇಟಿ ನೀಡಿ ಜೆಡಿಎಸ್ ನಾಯಕರಿಗೆ ಸಮಜಾಯಿಷಿ ನೀಡಿದರು. ಈ ವೇಳೆ ಶಾಸಕ ಎ.ಮಂಜು ಅವರು ಕುಮಾರಸ್ವಾಮಿಗೆ ಫೋನ್ ಮಾಡಿ ಡಿಸಿ ಕೈಗೆ ಕೊಟ್ಟರು. ಫೋನ್ ತೆಗೆದುಕೊಂಡ ಡಿಸಿ, ಎಲ್ಲಾ ವ್ಯವಸ್ಥೆ ಚೆನ್ನಾಗಿ ಆಗಿದೆ ಎಂದು ನೀವೇ ಮಾತಾಡಿದ್ರಲ್ಲ ಸಾರ್. ನಿಮಗೆ ಅಗೌರವ ಆಗಿದೆ ಎಂದು ಬಂದಿದ್ದಾರೆ ಎಂದು ಕುಮಾರಸ್ವಾಮಿಗೆ ಹೇಳಿದರು.
ಡಿಸಿ ಕುಮಾರಸ್ವಾಮಿ ಅವರ ಜೊತೆ ಫೋನಲ್ಲಿ ಮಾತನಾಡುತ್ತಲೇ ಜೆಡಿಎಸ್ ನಾಯಕರ ಪ್ರತಿಭಟನೆ ತಣ್ಣಗಾಯ್ತು. ಬಳಿಕ ಜಿಲ್ಲಾಧಿಕಾರಿ ಹಾಸನಾಂಬೆಯ ಪ್ರಸಾದ ತಿರಿಸಿ ಜೆಡಿಎಸ್ ನಾಯಕರಿಗೆ ತಿನ್ನಿಸಿ ಸಮಧಾನಪಡಿಸುವ ಯಶಸ್ವಿಯಾದರು. ಡಿಸಿ ಕ್ಷಮೆ ಕೇಳಬೇಕು. ಡಿಸಿ ಕ್ಷಮೆ ಕೇಳೊವರೆಗೆ ಇಲ್ಲಿಂದ ಹೊಗಲ್ಲ ಎಂದು ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದರು. ಆದ್ರೆ, ಡಿಸಿ ಸಮಾಧಾನದಿಂದಲೇ ಮನವೊಲಿಸುವಲ್ಲಿ ಯಶಸ್ವಿಯಾದರು. ಅಲ್ಲದೇ ಡಿಸಿ ಸ್ಥಳ ಕ್ಕೆ ಬರುತ್ತಲೇ ಅವರನ್ನು ಹಾಡಿ ಹೊಗಳಿರುವುದು ಕಂಡು ಬಂತು.

