ನಾಯಕ ಸಮುದಾಯದ ಬಗ್ಗೆ ರಮೇಶ್ ಕತ್ತಿ ಅಶ್ಲೀಲ ಪದ ಬಳಿಕೆ: ವಿಡಿಯೋ ವೈರಲ್
ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಗಳ ನಡುವೆ ಪೈಪೋಟಿ ಶುರುವಾಗಿದೆ. ಅದರಲ್ಲೂ ಹುಕ್ಕೇರಿ ಸಹಕಾರಿ ಚುನಾವಣೆಯಲ್ಲಿ ಗೆದ್ದು ಜಾರಕಿಹೊಳಿ ಬ್ರದರ್ಸ್ ಗೆ ಮೀಸೆ ತಿರಿವಿದ್ದ ರಮೇಶ್ ಕತ್ತಿ, ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ತೊಡೆತಟ್ಟಿದ್ದಾರೆ. ಈ ರಾಜಕೀಯ ಆರೋಪ ಪ್ರತ್ಯಾರೋಪದ ನಡುವೆ ರಮೇಶ್ ಕತ್ತಿ ಅವರು ನಾಯಕ ಸಮಾಜದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಸದ್ಯ ನಾಯಕ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬೆಳಗಾವಿ, (ಅಕ್ಟೋಬರ್ 19): ಬೆಳಗಾವಿ ರಾಜಕಾರಣದಲ್ಲಿ ಜಾರಕಿಹೊಳಿ ಹಾಗೂ ಕತ್ತಿ ಕುಟುಂಬಗಳ ನಡುವೆ ಪೈಪೋಟಿ ಶುರುವಾಗಿದೆ. ಅದರಲ್ಲೂ ಹುಕ್ಕೇರಿ ಸಹಕಾರಿ ಚುನಾವಣೆಯಲ್ಲಿ ಗೆದ್ದು ಜಾರಕಿಹೊಳಿ ಬ್ರದರ್ಸ್ ಗೆ ಮೀಸೆ ತಿರಿವಿದ್ದ ರಮೇಶ್ ಕತ್ತಿ, ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲೂ ತೊಡೆತಟ್ಟಿದ್ದಾರೆ. ಇದರೊಂದಿಗೆ ರಾಜಕೀಯ ಆರೋಪ ಪ್ರತ್ಯಾರೋಪದ ತಾರಕಕ್ಕೇರಿದ್ದು, ಈ ನಡುವೆ ರಮೇಶ್ ಕತ್ತಿ ಅವರು ನಾಯಕ ಸಮಾಜದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಸದ್ಯ ನಾಯಕ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸೇರಿ ನಾಯಕರ ಮುಂದೆ ಜಾರಕಿಹೊಳಿ ಹೆಸರು ಎತ್ತದೇ ಬ್ಯಾ. ಸೂ.. ಮಕ್ಕಳು ಪೋನ್ ಮಾಡಿ ಹೇಳ್ತಾರೆ ಎಂದು ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುವ ಬಿಕೆ ಮಾಡೆಲ್ ಶಾಲೆ ಆವರಣದಲ್ಲಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
