ಆಸಿಡ್ ದಾಳಿ ಆಗದಿದ್ರೆ ನಮ್ಮ ತಾಯಿ ಇನ್ನೂ 10 ವರ್ಷ ಬದುಕುತ್ತಿದ್ರು ಎಂದ HD ರೇವಣ್ಣ

Edited By:

Updated on: Jul 23, 2026 | 4:22 PM

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 2001ರಲ್ಲಿ ಆಸಿಡ್ ದಾಳಿ ಆಗದೆ ಹೋಗಿದ್ದರೆ ಅವರಿಗೆ (ಚೆನ್ನಮ್ಮ) ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇ ಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ ಆಗೋದು. ನಾನು ಇಲ್ಲದ ಕಾರಣ ನಮ್ಮ ತಾಯಿ ನೋವು ತಿಂದರು ಎಂದು ತಾಯಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ಹಾಸನ, (ಜುಲೈ 23): ಜೆಡಿಎಸ್ ಶಾಸಕ ಹೆಚ್​​ಡಿ ರೇವಣ್ಣ ಅವರು ತಮ್ಮ ತಾಯಿ ನಿಧನದ ಬಳಿಕ ಮೊದಲ ಸುದ್ದಿಗೋಷ್ಠಿ ಮಾಡಿದ್ದು, ತಮ್ಮ ತಾಯಿ ಚೆನ್ನಮ್ಮರ ಕೆಲ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆ್ಯಸಿಡ್ ದಾಳಿ ಘಟನೆ ಬಗ್ಗೆಯೂ ಬಹಿರಂಗಪಡಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, 2001ರಲ್ಲಿ ಆಸಿಡ್ ದಾಳಿ ಆಗದೆ ಹೋಗಿದ್ದರೆ ಅವರಿಗೆ (ಚೆನ್ನಮ್ಮ) ಇಷ್ಟು ಬೇಗ ಸಾವು ಬರ್ತಿರಲಿಲ್ಲ. ರೇವಣ್ಣನನ್ನ ಮುಗಿಸಲೇ ಬೇಕು ಎಂದು ಸಂಚು ರೂಪಿಸಿದ್ದರು. ಅಂದು ನಾನು ಇದ್ದಿದ್ದರೆ ನನ್ನ ಮೇಲೆ ದಾಳಿ ಆಗೋದು. ನಾನು ಇಲ್ಲದ ಕಾರಣ ನಮ್ಮ ತಾಯಿ ನೋವು ತಿಂದರು ಎಂದು ತಾಯಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

ನಮ್ಮ ತಾಯಿ ದೇವತೆಯಾಗಿ ನಮ್ಮ ಕುಟುಂಬ ಸಾಕಿದ್ದಾರೆ. ನಮ್ಮ ಅಮ್ಮನನ್ನ ನಮ್ಮ ತಂಗಿಯರು ನೋಡಿಕೊಂಡರು. ನಾವು ಹೋಗಿ ನೋಡಿಕೊಂಡು ಬರ್ತಿದ್ವಿ. ರಂಗನಾಥ ಸ್ವಾಮಿ ಪಾದದಡಿಯಲ್ಲಿ ಇರಬೇಕು ಎಂದು ಅಲ್ಲಿ ಅಂತ್ಯಕ್ರಿಯೆ ಮಾಡಿದ್ದೇವೆ. ನಮ್ಮ ತಂದೆ ಪಡುವಲಹಿಪ್ಪೆಯಲ್ಲಿ ಮಾಡೋಣ ಎಂದರು. ಆದ್ರೆ, ನಮ್ಮ ತಮ್ಮ ಕುಮಾರಸ್ವಾಮಿ ಇಲ್ಲೇ ಮಾಡೋಣ ಎಂದು ಹಠ ಹಿಡಿದರು. ಅವರು ಮೊದಲೇ ಅಲ್ಲಿ ಜಾಗ ಖರೀದಿ ಮಾಡಿದ್ರು. ಹಾಗಾಗಿ ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ ಸನ್ನಿದಾನದ ತಟದಲ್ಲಿ ಅಂತ್ಯಕ್ರಿಯೆ ಮಾಡಿದೆವು ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ  ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More