ಜೆಡಿಎಸ್​​ ಪಕ್ಷದ ಚಿಹ್ನೆಗೆ ಹೊಸ ಟಚ್​​? ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್

Updated on: Jan 10, 2026 | 2:59 PM

ಜೆಡಿಎಸ್ ಪಕ್ಷವು ತನ್ನ ತೆನೆ ಹೊತ್ತ ಮಹಿಳೆ ಚಿಹ್ನೆಗೆ ಚಕ್ರದ ಗುರುತನ್ನು ಸೇರಿಸಲು ಚಿಂತನೆ ನಡೆಸಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ. ಪಕ್ಷಕ್ಕೆ ಸಕಾರಾತ್ಮಕ ಶಕ್ತಿ ಹಾಗೂ ಚಟುವಟಿಕೆ ಹೆಚ್ಚಿಸುವ ನಂಬಿಕೆಯಲ್ಲಿ ಈ ಬದಲಾವಣೆ ಮಾಡಲಾಗುತ್ತಿದೆ. ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲು ಜೆಡಿಎಸ್ ಮುಂದಾಗಿದೆ.

ಬೆಂಗಳೂರು, ಜನವರಿ 10: ಜೆಡಿಎಸ್​ ಮತ್ತು ಕಾಂಗ್ರೆಸ್​ ನಡುವೆ ಟ್ವೀಟ್​ ವಾರ್​​ ಶುರುವಾಗಿದೆ. ಸೋಶಿಯಲ್​ ಮೀಡಿಯಾದಲ್ಲೇ ಒಬ್ಬರಿಗೊಬ್ಬರು ಟಾಂಗ್​​ ನೀಡುತ್ತಿದ್ದಾರೆ. ಈ ಮಧ್ಯೆ ಜೆಡಿಎಸ್​​ ಪಕ್ಷದ ಚಿಹ್ನೆಗೆ ಹೊಸ ಟಚ್​​ ನೀಡಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನಿನ್ನೆ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸಲಹೆ ನೀಡಿದ್ದಾರೆ. ಪ್ರಸ್ತುತ ಇರುವ ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಚಿಂತನೆ ನಡೆದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jan 10, 2026 02:57 PM