ಆಕರ್ಷಕ ಜಿಯೋ ಆಫರ್​ಗಳೊಂದಿಗೆ ಐಪಿಎಲ್ ಎರಡನೇ ಚರಣದ ಪಂದ್ಯಗಳನ್ನು ಪೋನ್​ನಲ್ಲೇ ನೋಡುವ ಅವಕಾಶ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 21, 2021 | 4:26 PM

ಕೋವಿಡ್​ನಿಂದಾಗಿ ಸ್ಥಗಿತಗೊಂಡಿದ್ದ 14 ನೇ ಸೀಸನ್ ಎರಡನೇ ಚರಣ ಕಳೆದ ರವಿವಾರ ಯುಎಈನಲ್ಲಿ ಆರಂಭವಾವಾಗುತ್ತಿದಂತಯೇ, ತಮ್ಮ ಜಿಯೋ ಚಂದಾದಾರರಿಗೆ ಅವರು ಭರ್ಜರಿ ಪ್ರೀ ಪೇಡ್ ಮತ್ತು ಪೋಸ್ಟ್ ಪೇಡ್ ಆಫರ್ ಗಳನ್ನು ನೀಡುತ್ತಿದ್ದಾರೆ.

ಇಂಡಿಯನ್ ಪ್ರಿಮೀಯರ್ ಲೀಗ್ ಸೀಸನ್ 14 ರ ಎರಡನೇ ಚರಣ ಆರಂಭವಾಗಿದೆ ಮತ್ತು ಎಂದಿನಂತೆ ಕ್ರಿಕೆಟ್ ಪ್ರೇಮಗಳು ಐಪಿಎಲ್ ಒದಗಿಸುವ ಮನರಂಜನೆಯನ್ನು ಆಸ್ವಾದಿಸುತ್ತಿದ್ದಾರೆ. ಮುಕೇಶ್ ಅಂಬಾನಿ ಅವರ ಮುಂಬೈ ಇಂಡಿಯನ್ಸ್ ಟೂರ್ನಿಯ ಭಾಗವಾಗಿರೋದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಮುಕೇಶ್ ಪಕ್ಕಾ ಬಿಸಿನೆಸ್​ಮನ್​. ತಮ್ಮ ರಿಲಯನ್ಸ್ ಸಂಸ್ಥೆಗೆ ಲಾಭವಾಗುವ ಯಾವುದೇ ಅವಕಾಶವನ್ನು ಹೋಗಗೊಡುವುದಿಲ. ಕ್ರಿಕೆಟ್ ಸೀಸನ್ ಬಂತೆಂದರೆ ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳವ ಪ್ರಯತ್ನ ಅವರದ್ದಾಗಿರುತ್ತದೆ.

ಕೋವಿಡ್​ನಿಂದಾಗಿ ಸ್ಥಗಿತಗೊಂಡಿದ್ದ 14 ನೇ ಸೀಸನ್ ಎರಡನೇ ಚರಣ ಕಳೆದ ರವಿವಾರ ಯುಎಈನಲ್ಲಿ ಆರಂಭವಾವಾಗುತ್ತಿದಂತಯೇ, ತಮ್ಮ ಜಿಯೋ ಚಂದಾದಾರರಿಗೆ ಅವರು ಭರ್ಜರಿ ಪ್ರೀ ಪೇಡ್ ಮತ್ತು ಪೋಸ್ಟ್ ಪೇಡ್ ಆಫರ್ ಗಳನ್ನು ನೀಡುತ್ತಿದ್ದಾರೆ. ಜಿಯೋ ವಿವಿಧ ವಿವಿಧ ಪ್ಲ್ಯಾನ್​ಗಳಲ್ಲಿ ನೀವು ಡಿಸ್ನಿ + ಹಾಟ್ ಸ್ಟಾರ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಮಾಸಿಕ 499 ರೂ. ಗಳ ಪ್ಲ್ಯಾನ್ ತೆಗೆದುಕೊಳ್ಳಬಯಸುವವರಿಗೆ ಡಿಸ್ನಿ + ಹಾಟ್ ಸ್ಟಾರ್ ಒಂದು ವರ್ಷ ಉಚಿತವಾಗಿ ಲಭ್ಯವಾಗಲಿದೆ. ಇದರೊಂದಿಗೆ ಜಿ ಡಾಟಾ ಉಚಿತ ಕಾಲ್​ಗಳು ಹಾಗೂ 100 ಎಸ್ ಎಮ್ ಎಸ್/ ದಿನ ಕೂಡ ಉಚಿತವಾಗಿ ಸಿಗಲಿವೆ. ಅದಲ್ಲದೆ ಹೆಚ್ಚುವರಿ 6 ಜಿಬಿ ಡಾಟಾದ ಆಶ್ವಾಸನೆ ಸಹ ಅಂಬಾನಿ ನೀಡಿದ್ದಾರೆ.

ಹಾಗೆಯೇ, 56-ದಿನ ಅವಧಿಯ 666 ರೂ. ಗಳ ಪ್ಲ್ಯಾನ್ ತೆಗೆದುಕೊಂಡರೆ 2 ಗ ಜಿಬಿ ಡಾಟಾ ಮತ್ತು ಒಂದು ವರ್ಷದ ಅವಧಿಗೆ ಡಿಸ್ನಿ + ಹಾಟ್ ಸ್ಟಾರ್ ಸೇವೆ ಉಚಿತವಾಗಿ ಸಿಗಲಿದೆ. ಮೇಲೆ ಹೇಳಿರುವ ಕಾಲ್ ಮತ್ತು ಎಸ್ ಎಮ್ ಎಮ್ ಆಫರ್​​ಗಳು ಸಹ ಸಿಗುತ್ತವೆ.

84-ದಿನ ಅವಧಿಯ ರೂ. 888 ಗಳ ಪ್ಲ್ಯಾನ್ ನಲ್ಲಿ 5 ಜಿಬಿ ಡಾಟಾ, ಒಂದು ವರ್ಷ ಅವಧಿಗೆ ಡಿಸ್ನಿ + ಮತ್ತು ಹಾಟ್​ ಸ್ಟಾರ್ ಗಳೊಂದಿಗೆ ಕಾಲ್ ಮತ್ತು ಎಸ್ ಎಮ್ ಎಮ್ ಸೇವೆ ಉಚಿತ.

ಕೊನೆಯದಾಗಿ 2599 ವಾರ್ಷಿಕ ಪ್ಲ್ಯಾನ್​ನಲ್ಲಿ 2 ಜಿಬಿ ಡಾಟಾ, ಒಂದು ವರ್ಷ ಅವಧಿಗೆ ಡಿಸ್ನಿ + ಮತ್ತು ಹಾಟ್ ಸ್ಟಾರ್​ಗಳೊಂದಿಗೆ ಕಾಲ್ ಮತ್ತು ಎಸ್ ಎಮ್ ಎಮ್ ಸೇವೆ ಉಚಿತ. ಇದಲ್ಲದೆ, 10 ಜಿಬಿ ಡಾಟಾವನ್ನು ಹೆಚ್ಚುವರಿಯಾಗಿ ನೀಡುವ ಪ್ರಾಮಿಸ್ ಸಹ ಅಂಬಾನಿ ಮಾಡಿದ್ದಾರೆ.

ಇದನ್ನೂ ಓದಿ:  Viral Video: ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ; ಹೃದಯಸ್ಪರ್ಶಿ ವಿಡಿಯೋವಿದು