ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
‘ಕೆಡಿ’ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇತ್ತೀಚೆಗೆ ‘ಶಿವ ಶಿವ..’ ಹಾಡು ಸೂಪರ್ ಹಿಟ್ ಆಗಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ಮಚ್ಚು ಹಿಡಿದಿದ್ದಾರೆ. ಈ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟ ಧ್ರುವ ಸರ್ಜಾ ಅವರು ಮಾತನಾಡಿದ್ದಾರೆ. ಟಿವಿ9 ಜೊತೆ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ನಾನು ಕೆಟ್ಟ ಕಾರಣಕ್ಕೆ ಮಚ್ಚು ಹಿಡಿಸಿಲ್ಲ. ಕರಿಯ ಚಿತ್ರದಲ್ಲಿ ದರ್ಶನ್ ಮಚ್ಚು ಹಿಡಿದರು. ಜೋಗಿ ಸಿನಿಮಾದಲ್ಲಿ ಶಿವಣ್ಣ ಹಿಡಿದರು. ಧ್ರುವ ಸರ್ಜಾ ಈಗ ಕೆಡಿ ಸಿನಿಮಾದಲ್ಲಿ ಯಾವ ಕಾರಣಕ್ಕೆ ಮಚ್ಚು ಹಿಡಿದಿದ್ದಾರೆ ಎಂಬುದನ್ನು ರಿಲೀಸ್ ಆದಾಗ ಜನರೇ ನಿರ್ಧಾರ ಮಾಡುತ್ತಾರೆ’ ಎಂದು ಜೋಗಿ ಪ್ರೇಮ್ ಅವರು ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ‘ಕೆಡಿ’ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.