‘ಏಕ್​ ಲವ್​ ಯಾ’ ಹೊಸ ರಿಲೀಸ್​ ದಿನಾಂಕ ಯಾವಾಗ ಅನೌನ್ಸ್​ ಆಗುತ್ತೆ? ಮಾಹಿತಿ ಹಂಚಿಕೊಂಡ ಪ್ರೇಮ್​​

| Updated By: ಮದನ್​ ಕುಮಾರ್​

Updated on: Jan 06, 2022 | 10:00 AM

ಜ.21ರಂದು ಬಿಡುಗಡೆ ಆಗಬೇಕು ಎಂದುಕೊಂಡಿದ್ದ ‘ಏಕ್​ ಲವ್​ ಯಾ’ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ ಆಗಿದೆ. ಆ ಬಗ್ಗೆ ನಿರ್ದೇಶಕ ಜೋಗಿ ಪ್ರೇಮ್​ ಮಾತನಾಡಿದ್ದಾರೆ.

ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಮುಂತಾದ ನಿರ್ಬಂಧಗಳ ಹೇರಿಕೆಯಿಂದ ಚಿತ್ರೋದ್ಯಮದ ವಹಿವಾಟು ಕುಸಿಯಲಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕ ಮುಂದೂಡಿಕೊಳ್ಳುತ್ತಿವೆ. ಜೋಗಿ ಪ್ರೇಮ್​ (Jogi Prem) ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ ಕೂಡ ಇದೇ ನಿರ್ಧಾರಕ್ಕೆ ಬಂದಿದೆ. ರಾಣಾ, ರಚಿತಾ ರಾಮ್ (Rachita Ram)​, ಗ್ರೀಷ್ಮಾ ನಾಣಯ್ಯ ಮುಖ್ಯಭೂಮಿಕೆ ನಿಭಾಯಿಸಿರುವ ಈ ಸಿನಿಮಾದ ರಿಲೀಸ್​ ದಿನಾಂಕ ಸಹ ಮುಂದೂಡಿಕೆ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.21ರಂದು ‘ಏಕ್​ ಲವ್​ ಯಾ’ (Ek Love Ya) ತೆರೆಗೆ ಬರಬೇಕಿತ್ತು. ಆದರೆ ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳು (Omicron Cases in India) ಹೆಚ್ಚುತ್ತಿರುವ ಕಾರಣ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಕ್ಯುಪೆನ್ಸಿಗೆ ಮಾತ್ರ ಅವಕಾಶ ನೀಡಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್​ ಮಾಡಿದರೆ ಕಲೆಕ್ಷನ್​ ಮೇಲೆ ಹೊಡೆತ ಬೀಳಲಿದೆ. ಹಾಗಾಗಿ ‘ಏಕ್​ ಲವ್​ ಯಾ’ ಬಿಡುಗಡೆ ದಿನಾಂಕವನ್ನು ಮುಂದೂಡಲು ಚಿತ್ರತಂಡ ನಿರ್ಧರಿಸಿದೆ. ‘ಕೊವಿಡ್​ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿ, ಎಲ್ಲ ಸಮಸ್ಯೆಗಳು ಪರಿಹಾರ ಆದಮೇಲೆ ಹೊಸ ಡೇಟ್​ ಅನೌನ್ಸ್​ ಮಾಡುತ್ತೇನೆ’ ಎಂದು ಪ್ರೇಮ್​ ಹೇಳಿದ್ದಾರೆ.

ಇದನ್ನೂ ಓದಿ:

‘ನನ್ನ ಉಸಿರು ಇರೋವರೆಗೆ ಪುನೀತ್​ ಫೋನ್​​ ನಂಬರ್​ ಡಿಲೀಟ್​ ಮಾಡಲ್ಲ’: ಜೋಗಿ ಪ್ರೇಮ್​ ಭಾವುಕ ಮಾತು

‘ಊಟ, ತಿಂಡಿ ಇಲ್ಲದೇ ಗಾಂಧಿನಗರದಲ್ಲಿ ಅಲೆದವನು ನಾನು’: ಜೋಗಿ ಪ್ರೇಮ್​ ಫ್ಲ್ಯಾಶ್​ ಬ್ಯಾಕ್​

Published on: Jan 06, 2022 09:58 AM