Puneeth Rajkumar: ಪುನೀತ್ಗೆ ಅಂತಿಮ ನಮನ ಸಲ್ಲಿಸಿದ ನಟ ಜ್ಯೂ.ಎನ್ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್
Jr NTR: ಟಾಲಿವುಡ್ ನಟ ಜ್ಯೂ.ಎನ್ಟಿಆರ್ ಕಂಠೀರವ ಕ್ರೀಡಾಂಗಣದಲ್ಲಿ ನಟ ಪುನೀತ್ ರಾಜಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಕೂಡ ನಮನ ಸಲ್ಲಿಸಿದ್ದಾರೆ.
ಸ್ಯಾಂಡಲ್ವುಡ್ ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದಿಂದ ಚಿತ್ರರಂಗ ಆಘಾತಕ್ಕೊಳಗಾಗಿದೆ. ಖ್ಯಾತ ಕಲಾವಿದರು, ತಂತ್ರಜ್ಞರು ಸೇರಿದಂತೆ ಹಲವರು ಪುನೀತ್ ಅಂತಿಮ ದರ್ಶನವನ್ನು ಪಡೆದು ನಮನ ಸಲ್ಲಿಸಿದ್ದಾರೆ. ತೆಲುಗು ಚಿತ್ರರಂಗದ ಹಲವು ಹಿರಿಯ ನಟರು ಕೂಡ ಪುನೀತ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಖ್ಯಾತ ನಟ ಜ್ಯೂ.ಎನ್ಟಿಆರ್ ಆಗಮಿಸಿ ಪುನೀತ್ಗೆ ನಮನ ಸಲ್ಲಿಸಿದ್ದಾರೆ. ಶಿವರಾಜ್ ಕುಮಾರ್ ಅವರನ್ನು ತಬ್ಬಿ ಸಾಂತ್ವನವನ್ನೂ ಹೇಳಿದ್ದಾರೆ. ಪುನೀತ್ ಅವರನ್ನು ನೋಡುತ್ತಿದ್ದಂತೆ ಜ್ಯೂ.ಎನ್ಟಿಆರ್ ಗದ್ಗದಿತರಾದ ದೃಶ್ಯ ಎಲ್ಲರ ಮನಕಲಕುವಂತಿತ್ತು. ಇದೇ ವೇಳೆ ಸ್ಯಾಂಡಲ್ವುಡ್ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಅಂತಿಮ ನಮನ ಸಲ್ಲಿಸಿದ್ದಾರೆ.
ಇದಕ್ಕೂ ಮುನ್ನ ನಟರಾದ ನಂದಮೂರಿ ಬಾಲಕೃಷ್ಣ ಹಾಗೂ ಪ್ರಭುದೇವ ಪುನೀತ್ ದರ್ಶನ ಮಾಡಿದ್ದರು. ಈ ವೇಳೆ ಕಂಬನಿ ಮಿಡಿದಿದ್ದ ಬಾಲಕೃಷ್ಣ, ನನ್ನ ಸಹೋದರನನ್ನು ಕಳೆದುಕೊಂಡಂತಾಗಿದೆ ಎಂದಿದ್ದರು.
ಇದನ್ನೂ ಓದಿ:
Puneeth Rajkumar: ‘ನಾನೂ ಅವರ ಕುಟುಂಬದವಳಾಗಿದ್ದೆ’: ಅಪ್ಪು ಅಂತಿಮ ನಮನದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾತು
‘ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’; ಪುನೀತ್ ರಾಜ್ಕುಮಾರ್ಗೆ ಸುದೀಪ್ ಭಾವುಕ ನುಡಿ ನಮನ