ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ

Updated on: Jul 16, 2025 | 8:07 PM

ಜನಾರ್ದನ ರೆಡ್ಡಿ ಮಗ ಕಿರೀಟಿ ರೆಡ್ಡಿ ಅಭಿನಯದ ‘ಜೂನಿಯರ್’ ಚಿತ್ರ ಜುಲೈ 18ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಜೆನಿಲಿಯಾ ದೇಶಮುಖ್ ಅವರು ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಕನ್ನಡದಲ್ಲಿ ಮತ್ತಷ್ಟು ಸಿನಿಮಾಗಳನ್ನು ಮಾಡುವ ಆಸೆ ಇದೆ ಎಂದು ಜೆನಿಲಿಯಾ ಹೇಳಿದ್ದಾರೆ.

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ನಟನೆಯ ‘ಜೂನಿಯರ್’ ಸಿನಿಮಾ (Junior Kannada Movie) ಜುಲೈ 18ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಜೆನಿಲಿಯಾ (Genelia) ಅವರು ನಟಿಸಿದ್ದಾರೆ. ಟಿವಿ9 ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಇದೇ ಸಿನಿಮಾದಲ್ಲಿ ಕಿರೀಟಿ ಜೊತೆ ಶ್ರೀಲೀಲಾ, ರವಿಚಂದ್ರನ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ನಾನು ಮಂಗಳೂರಿನ ಹುಡುಗಿ. ಅದು ನನ್ನ ಹೋಮ್ ಟೌನ್. ದಕ್ಷಿಣ ಭಾರತದಿಂದ ಶುರು ಮಾಡಿ ಹಿಂದಿಗೆ ಹೋದವಳು ನಾನು. ಶಿವರಾಜ್​ಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ಈಗ ಕಿರೀಟಿ ಸಿನಿಮಾ ಮೂಲಕ ವಾಪಸ್ ಬಂದಿದ್ದೇನೆ’ ಎಂದು ಜೆನಿಲಿಯಾ ದೇಶಮುಖ್ (Genelia Deshmukh) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.