ದಕ್ಷಿಣದವರನ್ನು ಟೀಕಿಸಲು ಬಂದ ಹಿಂದಿಯವರನ್ನು ಅಲ್ಲೇ ತಡೆದ ಜೆನಿಲಿಯಾ
ಜೆನಿಲಿಯಾ ಅವರು ಮುಂಬೈನಲ್ಲಿ ನೆಲೆಸಿದ್ದರೂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅವರ ಅನುಭವ ಅಪಾರ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ‘ಸತ್ಯ ಇನ್ ಲವ್’ ಮತ್ತು ‘ಜೂನಿಯರ್’ ಹೆಸರಿನ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪಡೆದ ಅನುಭವ ಮತ್ತು ಪಾತ್ರಗಳನ್ನು ಮೆಚ್ಚಿಕೊಂಡಿದ್ದಾರೆ.

ನಟಿ ಜೆನಿಲಿಯಾ (Genilia) ಅವರು ಈಗ ಮುಂಬೈನಲ್ಲಿ ಸೆಟಲ್ ಆಗಿರಬಹುದು. ಹಿಂದಿಯಲ್ಲಿ ಅವರು ಕೆಲವು ಸಿನಿಮಾ ಮಾಡಿರಬಹುದು. ಆದರೆ, ದಕ್ಷಿಣ ಚಿತ್ರರಂಗವನ್ನು ಅವರು ಮರೆತಿಲ್ಲ ಎಂಬುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಜೆನಿಲಿಯಾ ಅವರು ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ಹಿಂದಿಯ ‘ಸಿತಾರೇ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಇಂದು (ಜೂನ್ 20) ರಿಲೀಸ್ ಆಗಿದೆ. ಈ ಸಿನಿಮಾದ ಪ್ರಚಾರದ ವೇಳೆ ಕೆಲವರು ಅವರಿಗೆ ‘ನಿಮಗೆ ದಕ್ಷಿಣದಲ್ಲಿ ಒಳ್ಳೆಯ ಪಾತ್ರ ಸಿಕ್ಕಿಲ್ಲವಲ್ಲ’ ಎಂದು ಹೇಳಲು ಬಂದರು. ಆದರೆ, ಇದನ್ನು ಅವರು ತಳ್ಳಿ ಹಾಕಿದ್ದಾರೆ.
ಜೆನಿಲಿಯಾ ಹುಟ್ಟಿದ್ದು ಮುಂಬೈನಲ್ಲಿ. ಆದರೆ, ಅವರಿಗೆ ಹೆಚ್ಚು ಜನಪ್ರಿಯತೆ ನೀಡಿದ್ದು ದಕ್ಷಿಣದ ಚಿತ್ರರಂಗ. ಅವರು ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು. 2008ರಲ್ಲಿ ರಿಲೀಸ್ ಆದ ಶಿವರಾಜ್ಕುಮಾರ್ ನಟನೆಯ ‘ಸತ್ಯ ಇನ್ ಲವ್’ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಈ ಮೂಲಕ ಕನ್ನಡಕ್ಕೆ ಬಂದರು. ಈಗ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅವರಿಗೆ ದಕ್ಷಿಣದ ಬಗ್ಗೆ ಭಾರೀ ಗೌರವ ಇದೆ.
Genelia – Ritesh is one no nonsense star couple in bollywood and she cut him told i got solid roles ♥️ https://t.co/cny4sncTQn
— Balaji Sivakumar (@DesignSBalaji) June 19, 2025
ಹಿಂದಿಯವರು ಸಂದರ್ಶನ ಮಾಡುವಾಗ ‘ದಕ್ಷಿಣದಲ್ಲಿ ಆ ಸಮಸ್ಯೆ ಇದೆ’ ಎಂಬಿತ್ಯಾದಿ ಪ್ರಶ್ನೆ ಕೇಳೋದು ಸಾಮಾನ್ಯ. ಜೆನಿಲಿಯಾ ಅವರಿಗೂ ಇದೇ ರೀತಿ ಪ್ರಶ್ನೆಗಳು ಎದುರಾದವು. ‘ನಿಮಗೆ ದಕ್ಷಿಣದಲ್ಲಿ ಒಳ್ಳೆಯ ಪಾತ್ರ ಸಿಕ್ಕೇ ಇಲ್ಲ ಅಲ್ಲವಾ’ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ಇಲ್ಲ ನನಗೆ ಒಳ್ಳೆಯ ಪಾತ್ರಗಳು ಸಿಕ್ಕಿವೆ. ನನ್ನ ದಕ್ಷಿಣದ ಸಿನಿಮಾಗಳನ್ನು ನೋಡಿದರೆ ನನ್ನ ವೃತ್ತಿ ಜೀವನದ ಅತ್ಯುತ್ತಮ ಪಾತ್ರಗಳು ಸಿಕ್ಕಿದ್ದು ಅಲ್ಲಿಯೇ. ಅದು ನನ್ನ ಕಲಿಕೆಯ ಸ್ಥಳ ಆಗಿತ್ತು. ಹೈದರಾಬಾದ್ಗೆ ಹೋದರೆ ನನ್ನನ್ನು ಈಗಲೂ ಹಾಸಿನಿ (ಬೊಮ್ಮರಿಲ್ಲು ಚಿತ್ರದ ಪಾತ್ರ) ಎಂದು ಕರೆಯುತ್ತಾರೆ. ತಮಿಳಿನಲ್ಲಿ ಹರಿಣಿ ಎನ್ನುತ್ತಾರೆ. ಈ ರೀತಿ ಪಾತ್ರ ಸಿಗೋಕೆ ನಾನು ಅದೃಷ್ಟ ಮಾಡಿದ್ದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಸ್ಪರ್ಧೆ ಬೇಡ ಎಂಬ ನಿರ್ಧಾರ; ಅಂದುಕೊಂಡಿದ್ದಕ್ಕಿಂತ ಮೊದಲೇ ಆಮಿರ್ ಖಾನ್ ಸಿನಿಮಾ ರಿಲೀಸ್
ಶಂಕರ್ ಹಾಗೂ ರಾಜಮೌಳಿ ರೀತಿಯ ನಿರ್ದೇಶಕರ ಜೊತೆ ಹಾಗೂ ಹೊಸ ತಂತ್ರಜ್ಞರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ. ‘ಸಿತಾರೇ ಜಮೀನ್ ಪರ್’ ಚಿತ್ರದಲ್ಲಿ ಅವರ ಪಾತ್ರ ಯಾವ ರೀತಿ ಇರಲಿದೆ ಎನ್ನುವ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







