AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲಕ್ಷ್ಮೀ ನಿವಾಸ’ದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್​ಬೈ; ಹೊಸ ಕಲಾವಿದೆ ಇವರೇ?

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿದ್ದ ನಟಿ ಶ್ವೇತಾ ಅವರು ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ. ತಮ್ಮ ತಾಯಿಯ ಆರೋಗ್ಯ ಸಮಸ್ಯೆಯನ್ನು ಕಾರಣವಾಗಿ ನೀಡಿದ್ದಾರೆ. ಅವರ ನಿರ್ಗಮನದಿಂದ ಪ್ರೇಕ್ಷಕರಲ್ಲಿ ಬೇಸರ ಮೂಡಿದ್ದು, ಬದಲಿ ಪಾತ್ರಧಾರಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

‘ಲಕ್ಷ್ಮೀ ನಿವಾಸ’ದ ಲಕ್ಷ್ಮೀ ಪಾತ್ರಕ್ಕೆ ಶ್ವೇತಾ ಗುಡ್​ಬೈ; ಹೊಸ ಕಲಾವಿದೆ ಇವರೇ?
ಲಕ್ಷ್ಮೀ ನಿವಾಸ
ರಾಜೇಶ್ ದುಗ್ಗುಮನೆ
|

Updated on:Jun 20, 2025 | 7:39 AM

Share

‘ಲಕ್ಷ್ಮೀ ನಿವಾಸ’ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ವೀಕ್ಷಕರಿಗೆ ಈಗ ಒಂದು ಬೇಸರದ ಸುದ್ದಿ ಸಿಕ್ಕಿದೆ. ಈ ಧಾರಾವಾಹಿಯಿಂದ ಲಕ್ಷ್ಮೀ ಪಾತ್ರಧಾರಿ ಶ್ವೇತಾ ಅಲಿಯಾಸ್ ವಿನೋದಿನಿ ಅವರು ಗುಡ್​ಬೈ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂದು ಕೂಡ ವಿವರಿಸಿದ್ದಾರೆ. ಇತ್ತೀಚೆಗೆ ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕಡಿಮೆ ಆಗಿತ್ತು. ಆಗಲೇ ಪ್ರೇಕ್ಷಕರಿಗೆ ಅನುಮಾನ ಮೂಡಿತ್ತು. ಈಗ ಅವರು ಹೊರ ಹೋಗುತ್ತಿರುವ ವಿಚಾರ ಅಧಿಕೃತ ಆಗಿದೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೇಳುತ್ತದೆ. ‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎನ್ನುವ ಲೋಕರೂಢಿಯ ಮಾತಿದೆ. ಇಡೀ ಧಾರಾವಾಹಿಗೆ ಅದುವೇ ಜೀವಾಳ. ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಎಷ್ಟು ಕಷ್ಟಪಡುತ್ತಾರೆ ಎಂದು ತೋರಿಸಲಾಗಿದೆ. ಮನೆಯ ಯಜಮಾನನ ಪಾತ್ರದಲ್ಲಿ ಅಶೋಕ್ ಜೆಂಬೆ ನಟಿಸುತ್ತಿದ್ದಾರೆ. ಅವರ ಪತ್ನಿ ಲಕ್ಮೀ ಪಾತ್ರದಲ್ಲಿ ಶ್ವೇತಾ ಇದ್ದರು.

ಇದನ್ನೂ ಓದಿ
Image
ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ
Image
ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
Image
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ಶ್ವೇತಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದರು. ಆ ಬಳಿಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು. 2023-24ರವರೆಗೆ ಅವರು ತಮಿಳಿನ ‘ಸೀತಾ ರಮಣ್’ ಧಾರಾವಾಹಿಯಲ್ಲಿ ನಟಿಸಿದ್ದರು. 2024ರಲ್ಲಿ ಆರಂಭ ಆದ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಅವರು ನಟನೆ ಆರಂಭಿಸಿದ್ದರು. ಆದರೆ, ಈಗ ಅವರು ವೈಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ.

ನಟಿ ಹೇಳಿದ್ದೇನು?

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿರೋ ಅವರು, ‘ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕೆಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನನ್ನು ಮತ್ತೆ ಕನ್ನಡ ಜನರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದ. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಹೊಸ ಪಾತ್ರಧಾರಿ ಯಾರು?

ಈಗ ಎಲ್ಲರಲ್ಲೂ ಕೇಳಿ ಬರುತ್ತಿರುವ ಒಂದೇ ಪ್ರಶ್ನೆ ಎಂದರೆ ಅವರು ಬಿಟ್ಟು ಹೋದ ಪಾತ್ರಕ್ಕೆ ಬರೋ ಕಲಾವಿದೆ ಯಾರು ಎಂದು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕೆಲವರು ಸುಧಾರಾಣಿ ಎಂದು ಹೇಳಿದರೆ ಇನ್ನೂ ಕೆಲವರು ಸ್ಪರ್ಶ ರೇಖಾ ಸೂಕ್ತ ಎನ್ನುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Fri, 20 June 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?