AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ

ರುಕ್ಮಿಣಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈ ಫೋಟೋಗಳು ವೈರ್ ಆಗುತ್ತವೆ. ಈಗ ರುಕ್ಮಿಣಿ ವಸಂತ್ ಅವರ ಹುಲಿ ಚಿತ್ರದ ಶರ್ಟ್ ಧರಿಸಿರುವ ಫೋಟೋ ವೈರಲ್ ಆಗಿದೆ. ಇದಕ್ಕೆ ಒಂದು ವಿಶೇಷ ಕಾರಣ ಇದೆ ಎಂದು ಅನೇಕರು ಊಹಿಸಿದ್ದಾರೆ.

ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ
ಜೂನಿಯರ್ ಎನ್​ಟಿಆರ್
ರಾಜೇಶ್ ದುಗ್ಗುಮನೆ
|

Updated on:Jun 20, 2025 | 7:20 AM

Share

ರುಕ್ಮಿಣಿ ವಸಂತ್ (Rukmini Vasanth) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ಹಲವು ಸೂಪರ್​ಸ್ಟಾರ್​ಗಳ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ರುಕ್ಮಿಣಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಈಗ ಅವರು ಹಂಚಿಕೊಂಡಿರೋ ಒಂದು ಫೋಟೋ ವೈರಲ್ ಆಗಿ ಗಮನ ಸೆಳೆದಿದೆ. ಈ ಫೋಟೋದಲ್ಲಿ ಗಮನ ಸೆಳೆದಿದ್ದು ಅವರ ಶರ್ಟ್ ಮೇಲಿರೋ ಟೈಗರ್ ಚಿತ್ರ. ಇದಕ್ಕೆ ಒಂದು ವಿಶೇಷ ಕಾರಣ ಇದೆ ಎಂದು ಅನೇಕರು ಊಹಿಸಿದ್ದಾರೆ.

ರುಕ್ಮಿಣಿ ವಸಂತ್ ಅವರಿಗೆ ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿತು. ಆ ಬಳಿಕ ಅವರು ಹಿಂದೆ ತಿರುಗಿ ನೋಡಲೇ ಇಲ್ಲ. ಕನ್ನಡದಲ್ಲಿ ಗಣೇಶ್, ಶಿವರಾಜ್​ಕುಮಾರ್, ಶ್ರೀಮುರಳಿ ಜೊತೆ ತೆರೆ ಹಂಚಿಕೊಂಡರು. ತಮಿಳಿನಲ್ಲಿ ವಿಜಯ್ ಸೇತುಪತಿ ಜೊತೆ ಸಿನಿಮಾ ಮಾಡಿದ್ದಾರೆ. ತೆಲುಗಿನಲ್ಲೂ ಅವರಿಗೆ ಆಫರ್​ಗಳು ಬರುತ್ತಿವೆ.

ಇದನ್ನೂ ಓದಿ
Image
ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಫುಡ್ ವ್ಲಾಗರ್ ಆಗಿದ್ದೇಕೆ?
Image
ಪ್ರೆಗ್ನೆಂಟ್ ಕಿಯಾರಾಗೆ ವಿಶೇಷ ಸಹಾಯ ಮಾಡಿದ ಯಶ್; ಆಹಾ ಎಷ್ಟೊಳ್ಳೆ ಮನಸ್ಸು
Image
ಭಾರತದ ಸಿನಿಮಾ ಇತಿಹಾಸದಲ್ಲೇ ದುಬಾರಿ ಸೆಟ್ ನಿರ್ಮಿಸಿದ ರಾಜಮೌಳಿ
Image
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಧನರಾಜ್, ಪತ್ನಿ

ಜೂನಿಯರ್ ಎನ್​ಟಿಆರ್ ಹಾಗೂ ಪ್ರಶಾಂತ್ ನೀಲ್ ಸಿನಿಮಾದಲ್ಲಿ ರುಕ್ಮಿಣಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗ ರುಕ್ಮಿಣಿ ಅವರು ಟೈಗರ್ ಪ್ರಿಂಟ್ ಇರೋ ಶರ್ಟ್ ಹಾಕಿಕೊಳ್ಳಲು ಜೂನಿಯರ್ ಎನ್​ಟಿಆರ್​ ಸಿನಿಮಾ ಕಾರಣ ಎನ್ನಲಾಗಿದೆ. ಜೂನಿಯರ್ ಎನ್​ಟಿಆರ್ ಅವರನ್ನು ಎಲ್ಲರೂ ಯಂಗ್ ಟೈಗರ್ ಎನ್ನುತ್ತಾರೆ. ಅವರು ಜೂನಿಯರ್ ಎನ್​ಟಿಆರ್ ಸೆಟ್​ನ ಸೇರಿಕೊಂಡಿದ್ದೇನೆ ಎಂಬುದನ್ನು ತಿಳಿಸಲು ಈ ರೀತಿ ಶರ್ಟ್ ಹಾಕಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇದನ್ನೂ ಓದಿ: ‘ಸಿನಿಮಾ ವಿಚಾರದಲ್ಲಿ ನಾನು ಲಕ್ಕಿ ಅನ್ನೋದನ್ನು ಒಪ್ಪಿಕೊಳ್ಳುತ್ತೇನೆ’; ರುಕ್ಮಿಣಿ ವಸಂತ್

ಇತ್ತೀಚೆಗೆ ಜೂನಿಯರ್ ಎನ್​ಟಿಆರ್ ಅವರು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ಪ್ರಶಾಂತ್ ನೀಲ್ ಹಾಗೂ ಜೂ.ಎನ್​ಟಿಆರ್ ಸಿನಿಮಾದ ಟೈಟಲ್ ಅನಾವರಣ ಮಾಡುವ ಪ್ಲ್ಯಾನ್ ಇತ್ತು. ಆದರೆ, ‘ವಾರ್ 2’ ಟೀಸರ್ ಲಾಂಚ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇದನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕಲಾಗಿದೆ. ಕೆಲವು ವರದಿಗಳ ಪ್ರಕಾರ ಈ ಚಿತ್ರಕ್ಕೆ ‘ಡ್ರ್ಯಾಗನ್’ ಟೈಟಲ್ ಫಿಕ್ಸ್ ಆಗಿದೆ ಎನ್ನಲಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:00 am, Fri, 20 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ