ಕೇವಲ 29 ದಿನಕ್ಕೆ ಮಂತ್ರಾಲಯ ರಾಯರ ಮಠಕ್ಕೆ ಹರಿದು ಬಂತು ಕೋಟಿ ಕೋಟಿ ಕಾಣಿಕೆ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಕರ್ನಾಟಕದ ಗಡಿಯ ಬಳಿ ಮತ್ತು ತುಂಗಭದ್ರಾ ನದಿಯ ದಡದಲ್ಲಿರುವ ಮಂತ್ರಾಲಯ ರಾಯರ ಮಠದಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆದಿದ್ದು 29 ದಿನದಲ್ಲಿ 2 ಕೋಟಿ 93 ಲಕ್ಷ 11 ಸಾವಿರದ 306 ರೂ. ಸಂಗ್ರಹವಾಗಿದೆ.
ಮಂತ್ರಾಲಯ ರಾಯರ ಮಠಕ್ಕೆ ಮತ್ತೆ ಕೋಟಿ ಕೋಟಿ ಕಾಣಿಕೆ ಹರಿದು ಬಂದಿದೆ. ಮಂತ್ರಾಲಯ ರಾಯರ ಮಠದಲ್ಲಿ ಹುಂಡಿ ಹಣ ಕೋಟಿ ಗಡಿ ಮುಟ್ಟಿದೆ. 29 ದಿನದಲ್ಲಿ 2 ಕೋಟಿ 93 ಲಕ್ಷ 11 ಸಾವಿರದ 306 ರೂ. ಸಂಗ್ರಹವಾಗಿದೆ. ಇದರ ಜೊತೆಗೆ 136 ಗ್ರಾಂ ಚಿನ್ನ, 1510 ಗ್ರಾಂ ಬೆಳ್ಳಿ ಕೂಡ ಸಂಗ್ರಹವಾಗಿದೆ. ಸಾಲು ಸಾಲು ರಜೆ ಹಿನ್ನೆಲೆ ರಾಯರ ಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.
ಮಂತ್ರಾಲಯವು ಹಿಂದೂ ಧಾರ್ಮಿಕ ಸ್ಥಳ. ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ ಮೂಲ ಬೃಂದಾವನ ಇದೆ. ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರು ಪ್ರಭಾವಿ ಸಂತರಾಗಿದ್ದರು. ಅವರು ವೈಷ್ಣವ ಧರ್ಮವನ್ನು ಮತ್ತು ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೈತ ತತ್ವಶಾಸ್ತ್ರವನ್ನು ಪ್ರತಿಪಾದಿಸಿದರು. ಅವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹಲ್ಲಾದನ ಪುನರ್ಜನ್ಮವೆಂದು ಪರಿಗಣಿಸಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published on: Jun 01, 2024 01:06 PM