ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರ ಸ್ಫೋಟಕ ಹೇಳಿಕೆ

Edited By:

Updated on: Jan 09, 2026 | 2:11 PM

ತಾನು ಕೆಪಿಸಿಸಿ ಅಧ್ಯಕ್ಷಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಕೆ.ಎನ್​​. ರಾಜಣ್ಣ ಹೇಳಿದ್ದಾರೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ. ಸಚಿವನಾದರೂ ಹೀಗೆ ಇರ್ತೇನೆ. ಇಲ್ಲ ಅಂದ್ರೂ ಹೀಗೆ ಇದ್ದೇನೆ ಎಂದಿದ್ದಾರೆ. ಪಕ್ಷದ ಅಧ್ಯಕ್ಷ ಗಿರಿ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ ಎಂದೂ ತಿಳಿಸಿದ್ದಾರೆ.

ಬೆಂಗಳೂರು, ಜನವರಿ 09: ಪಕ್ಷದ ಅಧ್ಯಕ್ಷ ಗಿರಿ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ. ಈಗ ಬಿಡೋಕೆ ಯಾವುದೇ ಸ್ಥಾನ ಬಾಕಿ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾದ್ರೆ ಪಕ್ಷ ಸಂಘಟನೆ ಮಾಡ್ತೀನಿ. ಹೈಕಮಾಂಡ್​​ಗೆ ಈ ಬಗ್ಗೆ ವಿಷಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್​. ರಾಜಣ್ಣ ಹೇಳಿದ್ದಾರೆ. ಸಂಪುಟ ಪುನಾರಚನೆ ಆದ್ರೆ ಮತ್ತೆ ಸಚಿವರು ಆಗ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಸಚಿವನಾದರೂ ಹೀಗೆ ಇರ್ತೇನೆ. ಇಲ್ಲ ಅಂದ್ರೂ ಹೀಗೆ ಇದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.