ಬಾಗಲಕೋಟೆ: ಭೀಕರ ಅಪಘಾತದ ಹೊರತಾಗಿಯೂ ಕಾಡಸಿದ್ದೇಶ್ವರ ಸ್ವಾಮೀಜಿ, ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಅಪಾಯದಿಂದ ಪಾರು

ಬಾಗಲಕೋಟೆ: ಭೀಕರ ಅಪಘಾತದ ಹೊರತಾಗಿಯೂ ಕಾಡಸಿದ್ದೇಶ್ವರ ಸ್ವಾಮೀಜಿ, ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಅಪಾಯದಿಂದ ಪಾರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 09, 2022 | 12:37 PM

ಗುಳೇದಗುಡ್ಡದ ತೋಗುಣಿಸಿ ತಾಂಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಮೀಜಿ ಕಾರು ಮರವೊಂದಕ್ಕೆ ಗುದ್ದಿದೆ.

ಬಾಗಲಕೋಟೆ: ಅದರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಒಂದೋ ಸತ್ತಿರಬಹುದು ಇಲ್ಲವೇ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿರಬಹುದೆಂದು ಅನಿಸದಿರದು. ಆದರೆ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ (Abinava Kadasiddeshwara Swamiji) ಅವರ ಚಾಲಕ ಹಾಗೂ ಇನ್ನೊಬ್ಬ ವ್ಯಕ್ತಿ ಭೀಕರ ಅಪಘಾತದ (accident) ಹೊರತಾಗಿಯೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿ ಗುಳೇದಗುಡ್ಡ (Guledgud) ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳೇದಗುಡ್ಡದ ತೋಗುಣಿಸಿ ತಾಂಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಮೀಜಿ ಕಾರು ಮರವೊಂದಕ್ಕೆ ಗುದ್ದಿದೆ.