ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟ: ರೈತರ ತೀವ್ರ ಆಕ್ರೋಶ

Edited By:

Updated on: Jun 13, 2026 | 5:54 PM

ರಾಜ್ಯಾದ್ಯಂತ ರಸಗೊಬ್ಬರ ಕೊರತೆ ಎದುರಾಗಿರುವಾಗಲೇ, ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಡಿಎಪಿ ಹೆಸರಿನಲ್ಲಿ ಮರಳು ಮತ್ತು ಮಣ್ಣು ಮಿಶ್ರಿತ ಕಳಪೆ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ವಿತರಿಸಲಾಗುತ್ತಿದೆ ಎಂದು ರೈತರು ಟಿವಿ9ಗೆ ತಿಳಿಸಿದ್ದಾರೆ. ರೈತರು ತಂದಿದ್ದ ಗೊಬ್ಬರದ ಮೂಟೆಗಳನ್ನು ಪರಿಶೀಲಿಸಿದಾಗ, ಕೆಲವಲ್ಲಿ ಕೇವಲ ಶೇ 20ರಷ್ಟು ಮಾತ್ರ ಗೊಬ್ಬರವಿತ್ತು ಎಂದು ತಿಳಿದುಬಂದಿದೆ. ಉಳಿದ ಶೇ 80ರಷ್ಟು ಮರಳು ಮತ್ತು ಮಣ್ಣು ಮಿಶ್ರಣವಾಗಿತ್ತು. ಇಂತಹ ಕಳಪೆ ಗೊಬ್ಬರವನ್ನು ಖರೀದಿಸಿ, ಮಣ್ಣಿಗೆ ಸುರಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಕಲಬುರಗಿ, ಜೂನ್ 13: ರಾಜ್ಯಾದ್ಯಂತ ರಸಗೊಬ್ಬರ ಕೊರತೆ ಎದುರಾಗಿರುವಾಗಲೇ, ಕಲಬುರಗಿಯಲ್ಲಿ ನಕಲಿ ಡಿಎಪಿ ರಸಗೊಬ್ಬರ ಮಾರಾಟವಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಡಿಎಪಿ ಹೆಸರಿನಲ್ಲಿ ಮರಳು ಮತ್ತು ಮಣ್ಣು ಮಿಶ್ರಿತ ಕಳಪೆ ಗೊಬ್ಬರವನ್ನು ದುಪ್ಪಟ್ಟು ಬೆಲೆಗೆ ವಿತರಿಸಲಾಗುತ್ತಿದೆ ಎಂದು ರೈತರು ಟಿವಿ9ಗೆ ತಿಳಿಸಿದ್ದಾರೆ.

ರೈತರು ತಂದಿದ್ದ ಗೊಬ್ಬರದ ಮೂಟೆಗಳನ್ನು ಪರಿಶೀಲಿಸಿದಾಗ, ಕೆಲವಲ್ಲಿ ಕೇವಲ ಶೇ 20ರಷ್ಟು ಮಾತ್ರ ಗೊಬ್ಬರವಿತ್ತು ಎಂದು ತಿಳಿದುಬಂದಿದೆ. ಉಳಿದ ಶೇ 80ರಷ್ಟು ಮರಳು ಮತ್ತು ಮಣ್ಣು ಮಿಶ್ರಣವಾಗಿತ್ತು. ಇಂತಹ ಕಳಪೆ ಗೊಬ್ಬರವನ್ನು ಖರೀದಿಸಿ, ಮಣ್ಣಿಗೆ ಸುರಿಯುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಕೃಷಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ರೈತರು ದೂರಿದ್ದಾರೆ. ಜೆವರ್ಗಿ ಮತ್ತು ಚಂದ್ರಿಕಾ ಆಗ್ರೋ ಸಿಂಡಿಕೇಟ್‌ನಂತಹ ಅಂಗಡಿಗಳಿಂದ ಕಳಪೆ ಗೊಬ್ಬರ ಬಂದಿರುವುದು ಕಂಡುಬಂದಿದೆ. ರೈತರು ತಾವು ಖರೀದಿಸಿದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳುಹಿಸಿ, ತಪ್ಪಿತಸ್ಥ ಅಂಗಡಿಗಳ ವಿರುದ್ಧ ಕೃಷಿ ಕಾಯಿದೆ 1985ರ ಅಡಿ ಕ್ರಮ ಜರುಗಿಸಿ, ಅಂಗಡಿಗಳನ್ನು ಸೀಜ್ ಮಾಡುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jun 13, 2026 05:52 PM
Follow Us