ಕಲಬುರಗಿ: ರಾಮ ಮಂದಿರ ಉದ್ಘಾಟನೆ ಆಮಂತ್ರಣ ಪತ್ರಿಕೆ ಲೋಗೋ ವಿನ್ಯಾಸಕಾರ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2024 | 6:43 PM

ಸಾವಿರಾರು ಲೋಗೋಗಳ ಮಧ್ಯೆ ನಾನು ರಚಿಸಿದ ಲೋಗೋ ಅಯ್ಕೆಯಾಗಿದ್ದು ಸಂತಸ ತಂದಿದೆ. ಬೆಳಿಗ್ಗೆಯಿಂದಲೂ ನನಗೆ ಶುಬಾಶಯಗಳ ಮಾಹಾಪೂರವೇ ಹರಿದು ಬರುತ್ತಿದೆ ಎಂದು ರಾಮ ಮಂದಿರ ಉದ್ಘಾಟನಾ ಆಮಂತ್ರಣ ಪತ್ರಿಕೆಯ ಲೋಗೋ ವಿನ್ಯಾಸಕಾರ ರಮೇಶ್ ತಿಪ್ಪನೂರ್ ಹೇಳಿದ್ದಾರೆ. ಭು ಶ್ರೀರಾಮನ ಆಶಿರ್ವಾದದಿಂದ ಲೋಗೋ ರಚನೆ ಸೌಭಾಗ್ಯ ನನ್ನದಾಗಿದೆ ಎಂದಿದ್ದಾರೆ.

ಕಲಬುರಗಿ, ಜನವರಿ 19: ರಾಮ ಮಂದಿರ (Ram Mandir) ಉದ್ಘಾಟನಾ ಆಮಂತ್ರಣ ಪತ್ರಿಕೆಯಲ್ಲಿ ಕಲಬುರಗಿ ಲೋಗೋ ಆಯ್ಕೆ ಆಗಿದೆ. ಈ ಕುರಿತಾಗಿ ಟಿವಿ9 ಜೊತೆ ಲೋಗೋ ವಿನ್ಯಾಸಕಾರ ರಮೇಶ್ ತಿಪ್ಪನೂರ್​ ಪ್ರತಿಕ್ರಿಯಿಸಿದ್ದಾರೆ. ಸಾವಿರಾರು ಲೋಗೋಗಳ ಮಧ್ಯೆ ನಾನು ರಚಿಸಿದ ಲೋಗೋ ಅಯ್ಕೆಯಾಗಿದ್ದು ಸಂತಸ ತಂದಿದೆ. ಬೆಳಿಗ್ಗೆಯಿಂದಲೂ ನನಗೆ ಶುಬಾಶಯಗಳ ಮಾಹಾಪೂರವೇ ಹರಿದು ಬರುತ್ತಿದೆ. ಲಕ್ಷಾಂತರ ಜನ ರಾಮಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಅಂತದ್ದರಲ್ಲಿ ಇದೊಂದು ಅಳಿಲು ಸೇವೆ. ನಮ್ಮದೇ ಬಂಧು ಪ್ರಿಂಟರ್ಸ್‌ನಲ್ಲಿ ಲೋಗೋ ವಿನ್ಯಾಸ ಮಾಡಿದ್ದೆ. ಅಯೋಧ್ಯ ಟ್ರಸ್ಟ್ ನನಗೆ ಲೋಗೋ ರಚನೆ ಮಾಡುವುದಕ್ಕೆ ಹೇಳಿದ್ದರು‌. ಪ್ರಭು ಶ್ರೀರಾಮನ ಆಶಿರ್ವಾದದಿಂದ ಲೋಗೋ ರಚನೆ ಸೌಭಾಗ್ಯ ನನ್ನದಾಗಿದೆ. ಲೋಗೋ ರಚಿಸಲು ವಿಶ್ವ ಹಿಂದೂ ಪರಿಷತ್ ಪ್ರಮುಖರು ಸಲಹೆ ನೀಡಿದ್ದರು. ಅದಕ್ಕಾಗಿ ‌ನಾನು ತಿಂಗಳಿನಿಂದ ಲೋಗೋ ವಿನ್ಯಾಸದಲ್ಲಿ ತೊಡಗಿದ್ದೆ. ಇದೀಗ ರಾಮ ಮಂದಿರ ಟ್ರಸ್ಟ್ ನಾನು ವಿನ್ಯಾಸ ಮಾಡಿದ ಲೋಗೋ ಫೈನಲ್ ಮಾಡಿದೆ. ಈ ಕೀರ್ತಿ ನನಗೆ ಮತ್ತು ಕುಟುಂಬಕ್ಕೆ ಅಷ್ಟೇ ಅಲ್ಲ, ಇಡೀ ಕಲಬುರಗಿ ಜನತೆಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on