ಕಲಬುರಗಿ: ಭೀಮಾ ನದಿ ಅಬ್ಬರಕ್ಕೆ ಊರಿಗೂರೆ ಮುಳುಗಡೆ; ಮನೆ ಬಿಟ್ಟು ಹೊರಟ ಗ್ರಾಮಸ್ಥರು
ಭೀಮಾ ನದಿ ಪ್ರವಾಹಕ್ಕೆ ಕಲಬುರಗಿ ಜಿಲ್ಲೆಯ ಜನರು ತತ್ತರಗೊಂಡಿದ್ದಾರೆ. ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಎಸ್ಡಿಆರ್ಎಫ್ ತಂಡದಿಂದ ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲಾಗಿದೆ. ಗ್ರಾಮಸ್ಥರು ಮನೆ, ಮಠ ಬಿಟ್ಟು ಹೊರಟು ಹೋಗಿದ್ದಾರೆ. ವಿಡಿಯೋ ನೋಡಿ.
ಕಲಬುರಗಿ, ಸೆಪ್ಟೆಂಬರ್ 29: ಭೀಮಾ ನದಿ (Bhima River) ಪ್ರವಾಹದಿಂದಾಗಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದರವಾಡ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಗ್ರಾಮಸ್ಥರು ಮನೆ, ಮಠ ಬಿಟ್ಟು ಬೇರೆಡೆ ತೆರಳುತ್ತಿದ್ದಾರೆ. ಸದ್ಯ ಎಸ್ಡಿಆರ್ಎಫ್ ತಂಡದಿಂದ ನೆರೆ ಸಂತ್ರಸ್ಥರನ್ನು ರಕ್ಷಣೆ ಮಾಡಲಾಗಿದೆ. ಶಾಸಕ ಅಜಯ್ ಸಿಂಗ್ ಮತ್ತು ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 29, 2025 12:46 PM
