ಕಲಬುರಗಿ: ಮಲಗಿದ್ದ ಮಹಿಳೆಯ ದೇಹದ ಮೇಲೆ ನಾಗರಹಾವೊಂದು ಹೆಡೆಯೆತ್ತಿ ನಿಂತಾಗ ಆಕೆ ತಾನು ನಂಬಿದ ದೇವರನ್ನು ಪ್ರಾರ್ಥಿಸಿದಳು!
ಭಾಗಮ್ಮ ತನ್ನ ಮನಸ್ಸಿನಲ್ಲೇ ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತ ಪ್ರಾರ್ಥಿಸಿಕೊಂಡ ಸ್ವಲ್ಪ ಹೊತ್ತಿನ ಬಳಿಕ ಹಾವು ತಾನಾಗೇ ಅಲ್ಲಿಂದ ಸರಿದು ಹೋಯಿತಂತೆ. ಬದುಕಿದೆಯಾ ಬಡಜೀವವೇ ಅಂದುಕೊಂಡಿರಬಹುದು ಭಾಗಮ್ಮ!
ಕಲಬುರಗಿ (Kalaburagi) ಜಿಲ್ಲೆಯ ಮಲ್ಲಾಬಾದ್ ನಿವಾಸಿ ಭಾಗಮ್ಮ (Bhagamma) ನಿಜಕ್ಕೂ ಗಟ್ಟಿಗಿತ್ತಿ ಮಾರಾಯ್ರೇ. ಆಕೆಯ ಸ್ಥಾನದಲ್ಲಿ ದುರ್ಬಲ ಹೃದಯದವರೇನಾದರೂ ಇದ್ದಿದ್ದರೆ ನಿಸ್ಸಂದೇಹವಾಗಿ ಹೃದಯಾಘಾತಕ್ಕೊಳಗಾಗುತ್ತಿದ್ದರು. ಭಾಗಮ್ಮ ತನ್ನ ಜಮೀನಿನಲ್ಲಿ ಮಂಚದ ಮೇಲೆ ಮಲಗಿದ್ದಾಗ ಆಕೆಯ ಮೈಮೇಲೆ ಹರಿದುಬಂದ ಭಾರಿ ಗಾತ್ರದ ನಾಗರಹಾವೊಂದು ಹೆಡೆಯೆತ್ತಿಕೊಂಡು ಅತ್ತಿತ್ತ ನೋಡುತ್ತಿದೆ. ಭಾಗಮ್ಮ ಕೊಂಚವೇ ಅಲುಗಾಡಿದ್ದರೂ ಹಾವು ಆಕೆಯನ್ನು ಕಚ್ಚುವ ಸಾಧ್ಯತೆ ಇತ್ತು. ಭೀತಿ ಹುಟ್ಟಿಸುವ ದೃಶ್ಯವನ್ನು ವಿಡಿಯೋ ಮಾಡಿದ ವ್ಯಕ್ತಿಯ ಕೈ ನಡುಗುತ್ತಿರುವುದನ್ನು ನೀವು ಗಮನಿಸಬಹುದು. ಭಾಗಮ್ಮ ತನ್ನ ಮನಸ್ಸಿನಲ್ಲೇ ಕಾಪಾಡು ಶ್ರೀಶೈಲ ಮಲ್ಲಯ್ಯ ಅಂತ ಪ್ರಾರ್ಥಿಸಿಕೊಂಡ ಸ್ವಲ್ಪ ಹೊತ್ತಿನ ಬಳಿಕ ಹಾವು ತಾನಾಗೇ ಅಲ್ಲಿಂದ ಸರಿದು ಹೋಯಿತಂತೆ. ಬದುಕಿದೆಯಾ ಬಡಜೀವವೇ ಅಂದುಕೊಂಡಿರಬಹುದು ಭಾಗಮ್ಮ!
Latest Videos