Mata Kannada Movie: ‘ಮಠ’ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಳಿ ಸ್ವಾಮಿ
Rishikumar Swamy | Mata: ‘ಮಠ’ ಚಿತ್ರದ ಟ್ರೇಲರ್ ನೋಡಿ ರಿಷಿಕುಮಾರ ಸ್ವಾಮಿ ಅವರು ತಕರಾರು ತೆಗೆದಿದ್ದಾರೆ. ಈ ಕುರಿತು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಾಧು ಕೋಕಿಲ, ಮಂಡ್ಯ ರಮೇಶ್, ತಬಲ ನಾಣಿ, ಬಿರಾದಾರ್ ಮುಂತಾದ ಖ್ಯಾತ ಕಲಾವಿದರು ಅಭಿನಯಿಸಿರುವ ಹೊಸ ‘ಮಠ’ (Mata Kannada Movie) ಚಿತ್ರದ ಟ್ರೇಲರ್ ಕೆಲವೇ ದಿನಗಳ ಹಿಂದೆ ರಿಲೀಸ್ ಆಗಿದೆ. ರವೀಂದ್ರ ವಂಶಿ ನಿರ್ದೇಶನದ ಈ ಚಿತ್ರದ ಬಗ್ಗೆ ಕಾಳಿ ಸ್ವಾಮಿ (ರಿಷಿಕುಮಾರ ಸ್ವಾಮಿ) ತಕರಾರು ತೆಗೆದಿದ್ದಾರೆ. ‘ಹಾಸ್ಯ ಮಾಡೋಕೆ ನಿಮಗೆ ಬೇರೆ ಧರ್ಮ ಇಲ್ಲವೇ? ನನ್ನ ಗುರುಗಳು ನನಗೆ ದೇವರ ಸಮಾನ. ಅದನ್ನು ನೀವು ವ್ಯಂಗ್ಯ ಮಾಡಿದರೆ ಮುಂದಿನ ಪೀಳಿಗೆಗೆ ಯಾವ ಭಾವನೆ ಮೂಡಲಿದೆ’ ಎಂದು ಕಾಳಿ ಸ್ವಾಮಿ (Rishikumar Swamy) ಪ್ರಶ್ನೆ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 15, 2022 03:49 PM